Monday, June 8, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಉಜಿರೆಯಲ್ಲಿ ಅಪರಿಚಿತ ಗಂಡಸಿನ ಮೃತದೇಹ ಪತ್ತೆ

ಬೆಳ್ತಂಗಡಿ : ಉಜಿರೆಯಲ್ಲಿ ಅಪರಿಚಿತ ಗಂಡಸಿನ ಮೃತದೇಹ ಪತ್ತೆ

- Advertisement -
- Advertisement -

ಬೆಳ್ತಂಗಡಿ : ಅಪರಿಚಿತ ಗಂಡಸಿನ ಮೃತದೇಹ ಉಜಿರೆ ಪೇಟೆಯಲ್ಲಿ ಪತ್ತೆಯಾಗಿದ್ದು. ಮೃತದೇಹದ ವಾರಿಸುದಾರರ ಪತ್ತೆಗೆ ಬೆಳ್ತಂಗಡಿ ಪೊಲೀಸರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.

ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಉಜಿರೆ ಪೇಟೆಯಲ್ಲಿ  ಸುಮಾರು 45 ರಿಂದ 50 ವರ್ಷದ ಅಪರಿಚಿತ ಗಂಡಸಿನ ಮೃತದೇಹವು ಜೂ‌.24 ರಂದು ಬೆಳಿಗ್ಗೆ 8 ಗಂಟೆಗೆ ದೊರೆತಿದ್ದು. ಈ ಬಗ್ಗೆ ಉಜಿರೆ ಗ್ರಾಮ ಪಂಚಾಯತ್ ಸಿಬ್ಬಂದಿ ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ UDR  ನಂಬರ್ 19/2025 ಕಲಂ 194 BNSS 2023 ರಂತೆ ಪ್ರಕರಣ ದಾಖಲಾಗಿದೆ.ಮೃತದೇಹವನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.

ಮೃದೇಹದ ವಾರಿಸುದಾರರ ಪತ್ತೆಗೆ ಸಹಕರಿಸಲು ವಿನಂತಿ: ಚಹರೆಗಳು

ಪ್ರಾಯ ಸುಮಾರು 45-50 ವರ್ಷ ಎದೆಯಲ್ಲಿ ಎಡ ಕೈಯಲ್ಲಿ G MAHESH ಎಂದೂ ಬಲ ಕೈಯಲ್ಲಿ A B G T K ಎಂದು ಹಚ್ಚೆ ಇದೆ. ತಿಳಿ ನೀಲಿ ಬಣ್ಣದ ಉದ್ದ ತೋಳಿನ ಅಂಗಿ ಕಡು ನೀಲಿ ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ. ಮೃತರ ವಾರಿಸುದಾರರು ಇದ್ದಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಯನ್ನು ಅಥವಾ 9480805370  ಅಥವಾ 08256232090 ಕ್ಕೆ ಸಂಪರ್ಕಿಸಲು ಬೆಳ್ತಂಗಡಿ ಪೊಲೀಸರು ಮನವಿ ಮಾಡಿದ್ದಾರೆ.

- Advertisement -

Latest News

error: Content is protected !!