Friday, June 5, 2026
Homeಅಪರಾಧತಾಳಿ ಸರ ಫಳ ಫಳ ಹೊಳೆಯುತ್ತೆ ಅಂತಾ ಕುಕ್ಕರ್ ನಲ್ಲಿ ಹಾಕಿದ ಮಹಿಳೆ : ಕೆಲವೇ...

ತಾಳಿ ಸರ ಫಳ ಫಳ ಹೊಳೆಯುತ್ತೆ ಅಂತಾ ಕುಕ್ಕರ್ ನಲ್ಲಿ ಹಾಕಿದ ಮಹಿಳೆ : ಕೆಲವೇ ನಿಮಿಷದಲ್ಲಿ ಸರ ಮಂಗಮಾಯ

- Advertisement -
- Advertisement -

ಶಿವಮೊಗ್ಗ: ಜಗತ್ತಿನಲ್ಲಿ ಮೋಸ ಹೋಗುವವರು ಇರೋ ತನಕ ಮೋಸ ಮಾಡುವವರು ಇದ್ದೇ ಇರ್ತಾರೆ ಅನ್ನೋ ಮಾತಿದೆ. ಈ ಮಾತು ಈ ಮಹಿಳೆಗೆ ಚೆನ್ನಾಗಿ ಒಪ್ಪುತ್ತೆ ಅನ್ಸುತ್ತೆ.

ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಆನವಟ್ಟಿ ನೆಹರು ನಗರದ ನಂದಾ (54) ಎಂಬುವರು ಮನೆಗೆ ನಿನ್ನೆ ಮಧ್ಯಾಹ್ನ ಇಬ್ಬರು ಅಪರಿಚಿತ ವ್ಯಕ್ತಿಗಳು ಬಂದಿದ್ದಾರೆ. ಹಾಗೇ ಬಂದವರು ನಿಮ್ಮ ಮನೆಯಲ್ಲಿ ಬೆಳ್ಳಿ, ಬಂಗಾರದ ಒಡವೆಗಳು ಇದ್ದರೆ ಕೊಡಿ ಪಾಲಿಶ್ ಮಾಡಿಕೊಡುತ್ತೇವೆ ಎಂದು ಹೇಳಿದ್ದಾರೆ. ವಂಚಕರನ್ನು ಮಾತನ್ನು ನಂಬಿದ ಮಹಿಳೆ ಮನೆಯಲ್ಲಿದ್ದ ಬೆಳ್ಳಿಯ ಒಡವೆಗಳನ್ನು ಕೊಟ್ಟಿದ್ದಾರೆ. ಈ ಬೆಳ್ಳಿ ಒಡವೆಗಳನ್ನು ಫಳ ಫಳ ಹೊಳೆಯುವಂತೆ ಪಾಲಿಶ್ ಮಾಡಿಕೊಟ್ಟಿದ್ದಾರೆ.

ಬೆಳ್ಳಿ ಒಡವೆಗಳು ಹೊಳೆಯುವಂತೆ ಆಗಿದ್ದನ್ನು ಕಂಡ ಅವರು, ತಮ್ಮ ಕೊರಳಲ್ಲಿದ್ದ 70 ಗ್ರಾಂ ತೂಕದ ಬಂಗಾರದ ಸರ ಮತ್ತು ಹತ್ತು ಗ್ರಾಂ ತೂಕದ ಉಂಗುರವನ್ನು ಪಾಲಿಶ್ ಮಾಡಲು ಕೊಟ್ಟಿದ್ದಾರೆ. ಕೂಡಲೇ ಅವರು ಅದನ್ನು ಒಂದು ಕುಕ್ಕರ್‌ನಲ್ಲಿ ಹಾಕಿ ಅರಿಶಿಣಪುಡಿ, ನೀರನ್ನು ಹಾಕಿದ್ದಾರೆ. ನಂತರ ಗ್ಯಾಸ್ ಸ್ಟವ್ ಮೇಲೆ ಇಟ್ಟು 30 ನಿಮಿಷ ಬಿಸಿ ಮಾಡಿ ನಂತರ ತೆಗೆಯಿರಿ ಎಂದು ಹೇಳಿದ್ದಾರೆ. ವಂಚಕರು ಹೇಳಿದಂತೆ 30 ನಿಮಿಷದ ನಂತರ ಕುಕ್ಕರ್ ತೆಗೆದು ನೋಡಿದರೆ ಚಿನ್ನ ಹೊಳೆಯುವುದಿರಲಿ ಮಂಗಮಾಯವಾಗಿದೆ. ಕುಕ್ಕರ್ ನಂದಾ ಅವರು ನೋಡಿ ನಗಲು ಶುರು ಮಾಡಿದೆ. ಆಗ ಅವರಿಗೆ ಮೋಸ ಹೋಗಿರುವುದು ಗೊತ್ತಾಗಿದ್ದು, ಆನವಟ್ಟಿ ಠಾಣೆಗೆ ದೂರು ನೀಡಿದ್ದಾರೆ.

ಅಂದ್ಹಾಗೆ ಇಂತಹ ಘಟನೆಗಳು ನಡೆಯುತ್ತಿರೋದು ಇದೇ ಮೊದಲಲ್ಲ. ಪದೇ ಪದೇ ಇಂತಹ ಘಟನೆಗಳು ಆಗುತ್ತಿದ್ದರೂ ಜನ ಎಚ್ಚೆತ್ತುಕೊಳ್ಳದೇ ಇರೋದು ದುರಾದೃಷ್ಟ.

- Advertisement -

Latest News

error: Content is protected !!