Friday, June 5, 2026
Homeತಾಜಾ ಸುದ್ದಿಸವಾಲಿನಲ್ಲಿ ಸೋತ ಕೇಂದ್ರ ಸಚಿವ ನಿತಿನ್‌ ಗಡ್ಕರಿ: ಸಂಸದನಿಗೆ ಕೊಡಬೇಕು 32 ಸಾವಿರ ಕೋಟಿ

ಸವಾಲಿನಲ್ಲಿ ಸೋತ ಕೇಂದ್ರ ಸಚಿವ ನಿತಿನ್‌ ಗಡ್ಕರಿ: ಸಂಸದನಿಗೆ ಕೊಡಬೇಕು 32 ಸಾವಿರ ಕೋಟಿ

- Advertisement -
- Advertisement -

ಭೋಪಾಲ್:‌ ತಾವೇ ಹಾಕಿದ್ದ ಸವಾಲಿನಲ್ಲಿ ಸೋತ ಕೇಂದ್ರ ಸಚಿವ ನಿತಿನ್ ಗಡ್ಕರಿ, ಇದೀಗ ಸಂಸದರಿಗೆ 32 ಸಾವಿರ ಕೋಟಿ ರೂ.ನೀಡಬೇಕಿದೆ. ಹೌದು, ಮಧ್ಯಪ್ರದೇಶದ ಉಜ್ಜಯಿನಿಯ ಸಂಸದ ಅನಿಲ್ ಫಿರೋಜಿಯಾ ಅವರು, ಈ ವರ್ಷ ಫೆಬ್ರವರಿ ತಿಂಗಳಿನಲ್ಲಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಗಡ್ಕರಿಯವರನ್ನು ಭೇಟಿಯಾಗಿದ್ದರು. ಈ ವೇಳೆ ತಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಸಂಸದರು ಗಡ್ಕರಿ ಅವರಲ್ಲಿ ಅನುದಾನವನ್ನು ಬಿಡುಗಡೆ ಮಾಡುವಂತೆ ಕೇಳಿಕೊಂಡಿದ್ದಾರೆ.

ಆಗ ಗಡ್ಕರಿಯವರು ನೀವು ನಿಮ್ಮ ತೂಕವನ್ನು ಇಳಿಸಿಕೊಳ್ಳಿ, ನೀವು ಇಳಿಸಿಕೊಳ್ಳುವ ಪ್ರತಿ ಕೆಜಿಗೆ 1,000 ಕೋಟಿ ರೂ. ಅನುದಾನ ಬಿಡುಗಡೆ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ. ಗಡ್ಕರಿ ಅವರು ಚಾಲೆಂಜ್ ನೀಡಿದ ಸಮಯ 135 ಕೆಜಿ ಇದ್ದ ಸಂಸದರು, ತಮ್ಮ ಕ್ಷೇತ್ರಕ್ಕಾಗಿ ವರ್ಕೌಟ್, ಡಯಟ್ ಮಾಡಿ ಇದೀಗ 32 ಕೆಜಿ ತೂಕವನ್ನು ಇಳಿಸಿಕೊಂಡಿದ್ದಾರೆ. ಈಗ ಸಂಸದರು 93 ಕೆಜಿ ಇದ್ದು ಗಡ್ಕರಿಯವರ ಚಾಲೆಂಜ್ ಗೆದ್ದಿದ್ದಾರೆ.

- Advertisement -

Latest News

error: Content is protected !!