ಬೆಳ್ತಂಗಡಿ : ಉಜಿರೆಯಲ್ಲಿರುವ ಸಂದ್ಯಾ ಫ್ರೆಶ್ ಸಂಸ್ಥೆಗೆ ರಾಜ್ಯ ಮಟ್ಟದ ರಾಜ್ ನ್ಯೂಸ್ ಮತ್ತು ಸುವರ್ಣ ನ್ಯೂಸ್ ವಾಹಿನಿಗಳಿಂದ ಉತ್ತಮ ಉದ್ಯಮ ಪ್ರಶಸ್ತಿ ಪುರಸ್ಕಾರ ಲಭಿಸಿದೆ.

ಉಜಿರೆ ಸಂಧ್ಯಾ ಫ್ರೆಶ್ ಸಂಸ್ಥೆಯ ಸಾಧನೆಯನ್ನು ಗುರುತಿಸಿ ಪ್ರತಿಷ್ಠಿತ ಶಿವಶ್ರೂ ಮೀಡಿಯಾ ಪ್ರೈ ಲಿಮಿಟೆಡ್ ,ರಾಜ್ ನ್ಯೂಸ್ ಮತ್ತು ರಾಜ್ ಮ್ಯೂಸಿಕ್ ಕನ್ನಡ ಆಯೋಜಿಸಿರುವ ವಿಶ್ವ ಮಹಿಳಾ ದಿನಚರಣೆ-2023 ರ ಉದ್ಯಮ ಕ್ಷೇತ್ರದಲ್ಲಿ ವರ್ಷದ ಮಹಿಳೆ ಪ್ರಶಸ್ತಿಯನ್ನು ಬೆಂಗಳೂರಿನ ವಸಂತನಗರದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಮಾ.14 ರಂದು ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿಯವರು ಸಂಧ್ಯಾ ಫ್ರೆಶ್ ಘಟಕದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅರ್ಚನಾ ರಾಜೇಶ್ ಪೈ ಯವರಿಗೆ ನೀಡಿದ್ದಾರೆ.

ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ನಡೆಸುತ್ತಿರುವ ಉಜ್ವಲ ಉದ್ಯಮಿ ಕರಾವಳಿ ಆವೃತ್ತಿ ಪ್ರಶಸ್ತಿಯನ್ನು ಉಜಿರೆಯ ಸಂಧ್ಯಾ ಫ್ರೆಶ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅರ್ಚನಾ ರಾಜೇಶ್ ಪೈ ಯವರಿಗೆ ಮಾ.24 ರಂದು ಮಂಗಳೂರಿನ ಸೂರ್ಯ ವುಡ್ಸ್ ಕನ್ವೆನ್‌ಷನ್ ಹಾಲ್ ನಲ್ಲಿ ನಿವೃತ್ತ ಲೋಕಾಯಕ್ತ ಸಂತೋಷ್ ಹೆಗ್ಡೆಯವರು ಪ್ರಶಸ್ತಿ ಪ್ರಧಾನ ಮಾಡಿದರು.