Wednesday, June 24, 2026
Homeಕರಾವಳಿಬೆಳ್ತಂಗಡಿ : ಬೈಕ್ ಸ್ಕೀಡ್ ಆಗಿ ಡಿವೈಡರ್ ಗೆ ಡಿಕ್ಕಿಯಾಗಿ ಸಹಸವಾರ ವಿದ್ಯಾರ್ಥಿ ಸಾವು: ಸವಾರನಿಗೆ...

ಬೆಳ್ತಂಗಡಿ : ಬೈಕ್ ಸ್ಕೀಡ್ ಆಗಿ ಡಿವೈಡರ್ ಗೆ ಡಿಕ್ಕಿಯಾಗಿ ಸಹಸವಾರ ವಿದ್ಯಾರ್ಥಿ ಸಾವು: ಸವಾರನಿಗೆ ಗಂಭೀರ ಗಾಯ

- Advertisement -
- Advertisement -

ಬೆಳ್ತಂಗಡಿ : ಬೈಕ್ ಸ್ಕೀಡ್ ಆಗಿ ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ಸಹ ಸವಾರ ವಿದ್ಯಾರ್ಥಿ ಸಾವನ್ನಪ್ಪಿ ಮತ್ತು ಸವಾರ ಗಂಭೀರ ಗಾಯಗೊಂಡ ಘಟನೆ ಉಜಿರೆ -ಧರ್ಮಸ್ಥಳ ರಾಜ್ಯ ಹೆದ್ದಾರಿಯ ಕಾಲೇಜು ರಸ್ತೆಯಲ್ಲಿರುವ ಪಂಚಮಿ ಲಾಡ್ಜ್ ಮುಂಭಾಗ ಮಾ.28 ರಂದು ರಾತ್ರಿ ಸುಮಾರು 12:30 ಗಂಟೆಗೆ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಅಮ್ಮನಂಗಡಿ ನಿವಾಸಿ ಚಂದ್ರಶೇಖರ್ ಪುತ್ರ, ಉಜಿರೆ ಖಾಸಗಿ ಕಾಲೇಜು ವಿದ್ಯಾರ್ಥಿ ನಿತೇಶ್(19) ಮೃತ ವಿದ್ಯಾರ್ಥಿ. ಬೈಕ್ ಸವಾರ ಪುತ್ತೂರು ನಿವಾಸಿ ವಿದ್ಯಾರ್ಥಿ ಲಿಖಿತ್(20) ಗಂಭೀರ ಗಾಯಗೊಂಡು ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಕಾರ್ಯಕ್ರಮ ಮುಗಿಸಿ ವಾಪಸ್ ಬರುತ್ತಿದ್ದಾಗ ಕೆ.ಟಿ.ಎಮ್ ಕಂಪನಿಯ ಬೈಕ್ ಸ್ಕೀಡ್ ಆಗಿ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಸಹ ಸವಾರ ಗಂಭೀರವಾಗಿ ಗಾಯಗೊಂಡಿದ್ದು ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಸಾಗಿಸುವ ವೇಳೆ ಸಾವನ್ನಪ್ಪಿದ್ದಾನೆ. ಇಬ್ಬರು ಉಜಿರೆ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳು.

ಅಪಘಾತ ನಡೆದ ಸ್ಥಳಕ್ಕೆ ಬೆಳ್ತಂಗಡಿ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!