Tuesday, July 1, 2025
Homeಕರಾವಳಿಉಜಿರೆ ಸಹಕಾರಿ ಸಂಘದಲ್ಲಿ ಗೋಲ್ ಮಾಲ್ ಪ್ರಕರಣ: ಗ್ರಾಹಕರ ಚಿನ್ನಾಭರಣ ವಾಪಸ್

ಉಜಿರೆ ಸಹಕಾರಿ ಸಂಘದಲ್ಲಿ ಗೋಲ್ ಮಾಲ್ ಪ್ರಕರಣ: ಗ್ರಾಹಕರ ಚಿನ್ನಾಭರಣ ವಾಪಸ್

spot_img
- Advertisement -
- Advertisement -

ಬೆಳ್ತಂಗಡಿ: ಉಜಿರೆಯ ಸಹಕಾರಿ ಸಂಘವೊಂದರ ನೌಕರನೊಬ್ಬ ತನ್ನದೇ ಸಂಘದಲ್ಲಿ ಬಾರಿ ಭಾರಿ ಗೊಲ್ ಮಾಲ್ ಮಾಡಿದ್ದ ಘಟನೆ ಅಗಸ್ಟ್ ನಲ್ಲಿ ತಿಂಗಳಲ್ಲಿ ನಡೆದಿತ್ತು.‌‌ನಂತರ ಸಂಘದ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳು ತನಿಖೆ ನಡೆಸಿದ್ದರು ಇಂದು ಗ್ರಾಹಕರಿಗೆ ತಮ್ಮ ಚಿನ್ನಾಭರಣ ವಾಪಸ್ ನೀಡುತ್ತಿದ್ದಾರೆ.

ತಾಲೂಕಿನ ಉಜಿರೆಯ ಸಹಕಾರಿ ಸಂಘವೊಂದರಲ್ಲಿ ಅನೇಕ ಗ್ರಾಹಕರು ಅಡವಿಟ್ಟ 70 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣವನ್ನು ಹಂತ ಹಂತವಾಗಿ ಉಜಿರೆಯ ಖಾಸಗಿ ಫೈನಾನ್ಸ್ ನಲ್ಲಿ ಹೆಚ್ಚಿನ ಹಣಕ್ಕೆ ಅಡವಿಟ್ಟು ಅದರಲ್ಲಿ ಬಂದ ಹಣವನ್ನು ದುರುಪಯೋಗ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿತ್ತು.

ಎಲ್ಲಾ ಗೊಲ್‌ಮಾಲ್ ಮಾಡಿರುವುದು ಅದೆ ಸಹಕಾರಿ ಸಂಘದ ನೌಕರ ಎಂದು ಮಂಗಳೂರಿನ ಸಹಕಾರಿ ಸಂಘದ ಹಿರಿಯ ಅಧಿಕಾರಿಗಳು ತನಿಖೆ ಮಾಡಿದರಲ್ಲಿ ತಿಳಿದು ಬಂದಿತ್ತು ಅದರಂತೆ ಸಂಘದ ಸದಸ್ಯರು ಬೆಳ್ತಂಗಡಿ ಠಾಣೆಗೆ ದೂರು ಅರ್ಜಿ ಕೂಡ ನೀಡಿದ್ದರು ಕೊನೆಗೆ ನೌಕರ ಒಂದು ತಿಂಗಳ ಸಮಯ ಕೇಳಿ ಎಲ್ಲಾ ಚಿನ್ನಾಭರಣ ವಾಪಸ್ ಕೊಡುವುದಾಗಿ ಠಾಣೆಯಲ್ಲಿ ಬರೆದುಕೊಟ್ಟಿದ್ದ ಅದರಲ್ಲದೆ ಸಂಘದ ಸದಸ್ಯರು ಕೂಡ ಗ್ರಾಹಕರ ಬಳಿ ಕ್ಷಮೆಯಾಚಿಸಿ ಭರವಸೆಯನ್ನು ಕೊಟ್ಟಿದ್ದರು ನಂತರ ನೌಕರ ಚಿನ್ನಾಭರಣವನ್ನು ಖಾಸಗಿ ಫೈನಾನ್ಸ್ ನಿಂದ ವಾಪಸ್ ಪಡೆದು ಸಂಘಕ್ಕೆ ನೀಡಿದ್ದು ಅದರಂತೆ ಇಂದು ಎಲ್ಲಾ ಗ್ರಾಹಕರಿಗೆ ಇಂದಿನವರೆಗೆ ಬಡ್ಡಿ ಸಮೇತ ವಸೂಲಿ ಮಾಡಿ ಹಿಂದಿರುಗಿಸುತ್ತಿದ್ದಾರೆ ಎಂದು ಗ್ರಾಹಕರು ತಿಳಿಸಿದ್ದಾರೆ.

ಮೋಸ ಮಾಡಿದ ನೌಕರರನ್ನು ಸಂಘ ಇನ್ನೂ ಮುಂದೆ ಯಾವ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕಾಗಿದೆ‌.

- Advertisement -
spot_img

Latest News

error: Content is protected !!