ಉಡುಪಿ: ಲಾಡ್ಜ್ ಮೇಲೆ ಪೊಲೀಸರು ದಾಳಿ ನಡೆಸುವ ವೇಳೆ ಮಾದಕವಸ್ತು ಹೊಂದಿದ್ದ ಮೂವರನ್ನು ಪೊಲೀಸರು ಬಂಧಿಸಿರುವ ಘಟನೆ ಮಣಿಪಾಲ ದಶರಥನಗರದ ಡೌನ್ ಟೌನ್ ಲಾಡ್ಜ್ ನಲ್ಲಿ ನಡೆದಿದೆ.
ಕಾಪು ನಿವಾಸಿ ಮಹಮ್ಮದ್ ಅಜರುದ್ದೀನ್ ಯಾನೆ ಮಂಚಕಲ್ ಅಜರುದ್ದೀನ್, ಪುಣೆಯ ರಾಜೇಶ್ ಪ್ರಕಾಶ್ ಜಾಧವ್ ಹಾಗೂ ಮಲ್ಪೆಯ ನಾಜೀಲ್ ಯಾನೆ ಆಶಿಫ್ ಬಂಧಿತ ಆರೋಪಿಗಳು.
ಈ ಮೂವರು ಆರೋಪಿಗಳು ಮಾದಕವಸ್ತುಗಳೊಂದಿಗೆ ಡೌನ್ ಟೌನ್ ಲಾಡ್ಜ್ ನ ರೂಮ್ ನಂ. 106ರಲ್ಲಿ ವಾಸ್ತವ್ಯ ಹೂಡಿದ್ದರು.ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ಬಂಧಿತರಿಂದ 40 ಸಾವಿರ ಮೌಲ್ಯದ 13.70 ಗ್ರಾಂ ತೂಕದ ಎಂಡಿಎಂಎ, 10,500 ರೂಪಾಯಿ ಮೌಲ್ಯದ 225 ಗ್ರಾಂ ಗಾಂಜಾ , ಪ್ಲಾಸ್ಟಿಕ್ ಸಣ್ಣ ಸಣ್ಣ ಕವರ್ 15, 5 ಸಿರಿಂಜ್‌ಗಳು , Sterile water 5 ml ನ 3 ಪ್ಲಾಸ್ಟಿಕ್ ಸೀಸೆ ಹಾಗೂ ಮೊಬೈಲ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಕುರಿತು ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 70/2025 ಕಲಂ: 8(c), 20(b),22(b) NDPS ACT ರಂತೆ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.


