Monday, June 8, 2026
Homeಕರಾವಳಿಉಡುಪಿಉಡುಪಿ; ಶೌಚಾಲಯದಲ್ಲಿ ಮೊಬೈಲ್ ಇಟ್ಟು ರೆಕಾರ್ಡ್ ಮಾಡುತ್ತಿದ್ದ ವಿದ್ಯಾರ್ಥಿನಿಯರು ಅಮಾನತು

ಉಡುಪಿ; ಶೌಚಾಲಯದಲ್ಲಿ ಮೊಬೈಲ್ ಇಟ್ಟು ರೆಕಾರ್ಡ್ ಮಾಡುತ್ತಿದ್ದ ವಿದ್ಯಾರ್ಥಿನಿಯರು ಅಮಾನತು

- Advertisement -
- Advertisement -

ಉಡುಪಿ; ಶೌಚಾಲಯದಲ್ಲಿ ಮೊಬೈಲ್ ಇಟ್ಟು ರೆಕಾರ್ಡ್ ಮಾಡುತ್ತಿದ್ದ ವಿದ್ಯಾರ್ಥಿನಿಯರನ್ನು  ಅಮಾನತು ಮಾಡಿರುವ ಘಟನೆ ಉಡುಪಿಯ ಖಾಸಗಿ ನೇತ್ರ ಚಿಕಿತ್ಸಾಲಯ ಹಾಗೂ ನರ್ಸಿಂಗ್ ಹೋಂನಲ್ಲಿ ನಡೆದಿದೆ.

ಕಾಲೇಜಿನ ಒಂದು ವಿದ್ಯಾರ್ಥಿನಿಯರ ಗುಂಪು ಶೌಚಾಲಯದಲ್ಲಿ ಮೊಬೈಲ್  ಇಟ್ಟು ತಮಗೆ ವಿರೋಧವಿದ್ದ ಇನ್ನೊಂದು ಗುಂಪಿನ ವಿದ್ಯಾರ್ಥಿನಿಯರ ವಿಡಿಯೋ ರೆಕಾರ್ಡ್ ಮಾಡಿ ವಾಟ್ಸಾಪ್ ಗ್ರೂಪ್ ಗಳಲ್ಲಿ ಹಂಚಿಕೊಂಡಿದೆ ಎನ್ನಲಾಗಿದೆ. ಇದು ಇನ್ನೊಂದು ಗುಂಪಿಗೆ ಗೊತ್ತಾಗುತ್ತಿದ್ದಂತೆ ಗಲಾಟೆ ನಡೆದಿದೆ. ಈ ವಿಚಾರ ಆಸ್ಪತ್ರೆಯ ಆಡಳಿತ ಮಂಡಳಿಗೆ ತಿಳಿದು ಆಡಳಿತ ಮಂಡಳಿ ವಿದ್ಯಾರ್ಥಿನಿಯರಿಂದ ಮುಚ್ಚಳಿಕೆ ಬರೆಸಿಕೊಂಡು ಶಿಸ್ತು ಕ್ರಮ ಜರಗಿಸಿದೆ

- Advertisement -

Latest News

error: Content is protected !!