- Advertisement -
![]()
- Advertisement -
ಉಡುಪಿ: ಬೋಟ್‌ನಲ್ಲೇ ಕುಸಿದು ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಮಲ್ಪೆಯಲ್ಲಿ ನಡೆದಿದೆ. ಬಡಾನಿಡಿಯೂರು ಗ್ರಾಮದ ರಮೇಶ ಟಿ.(52) ಮೃತ ದುರ್ದೈವಿ.
ಮಂಗಳವಾರ ನಸುಕಿನ ಜಾವ 5ಕ್ಕೆ ಬೋಟ್‌ನಲ್ಲಿ ಹಾಕಿದ್ದ ಬಲೆಯ ಪರಿ ಕಟ್ಟುವಾಗ ತಲೆಸುತ್ತು ಬಂದು ಬಿದ್ದಿದ್ದರು. ಚಿಕಿತ್ಸೆಗಾಗಿ ಕೂಡಲೇ ಮಲ್ಪೆಯ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಖಾಸಗಿ ಆಸ್ಪತ್ರೆಗೆ ತರಲಾಗಿತ್ತು. ಪರೀಕ್ಷಿಸಿದ ವೈದ್ಯರು ರಮೇಶ ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಸಹೋದರ ನಿತ್ಯಾನಂದ ನೀಡಿದ ದೂರಿಂನಂತೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
- Advertisement -


