Saturday, June 27, 2026
Homeಕರಾವಳಿಉಡುಪಿಉಡುಪಿ: ಜ್ಯುವೆಲರಿ ವರ್ಕ್ ಶಾಪ್ ವೊಂದಕ್ಕೆ ನುಗ್ಗಿ 6 ಲಕ್ಷ ರೂ. ಮೌಲ್ಯದ ಚಿನ್ನದ ಗಟ್ಟಿ...

ಉಡುಪಿ: ಜ್ಯುವೆಲರಿ ವರ್ಕ್ ಶಾಪ್ ವೊಂದಕ್ಕೆ ನುಗ್ಗಿ 6 ಲಕ್ಷ ರೂ. ಮೌಲ್ಯದ ಚಿನ್ನದ ಗಟ್ಟಿ ಹಾಗೂ ಗೋಲ್ಡ್ ಲಿಕ್ವಿಡ್ ಕಳ್ಳತನ

- Advertisement -
- Advertisement -

ಉಡುಪಿ: ಕಳ್ಳರು ಜ್ಯುವೆಲರಿ ವರ್ಕ್ ಶಾಪ್ ವೊಂದಕ್ಕೆ ನುಗ್ಗಿ 6 ಲಕ್ಷ ರೂ. ಮೌಲ್ಯದ ಚಿನ್ನದ ಗಟ್ಟಿ ಹಾಗೂ ಗೋಲ್ಡ್ ಲಿಕ್ವಿಡ್ ಕಳ್ಳತನ ಮಾಡಿರುವ ಘಟನೆ ಉಡುಪಿ ಚಿತ್ತರಂಜನ್ ಸರ್ಕಲ್ ಬಳಿಯ ವೈಭವ್ ರಿಫೈನರ್ ಎಂಬ ಜ್ಯುವೆಲರಿ ವರ್ಕ್ ಶಾಪ್ ನಲ್ಲಿ ನಡೆದಿದೆ.

 ಸೋಮವಾರ  ತಡರಾತ್ರಿ ಅಂಗಡಿಗೆ ನುಗ್ಗಿದ ಕಳ್ಳರು ಚಿನ್ನ ಮತ್ತು ಬೆಳ್ಳಿ ಕರಗಿಸುವ ಅಂಗಡಿಗೆ ನಕಲಿ ಬೀಗ ಬಳಸಿ ನುಗ್ಗಿದ ಕಳ್ಳರು ಡ್ರಾವರ್‌ನ ನಕಲಿ ಬೀಗದಿಂದ 600 ಗ್ರಾಂ ತೂಕದ ಸುಮಾರು 6 ಲಕ್ಷ ರೂ. ಮೌಲ್ಯದ ಚಿನ್ನದ ಗಟ್ಟಿ ಮತ್ತು ಗೋಲ್ಡ್ ಲಿಕ್ವಿಡ್ ಸೇರಿದಂತೆ ವಿವಿಧ ಸೊತ್ತುಗಳನ್ನು ಕಳವು ಮಾಡಿದ್ದಾರೆ.

ಇದೇವೇಳೆ ಕಳ್ಳರ ಕೃತ್ಯದ ಸಿಸಿ ಕ್ಯಾಮೆರಾ ವಿಡಿಯೋ ಲಭ್ಯವಾಗಿದ್ದು ಕಳ್ಳತನಕ್ಕೂ ಮುನ್ನ ಸಿಸಿ ಕ್ಯಾಮೆರಾವೊಂದನ್ನು ಕಳ್ಳರು ಪೆಯಿಂಟ್ ಸ್ಪ್ರೇ  ಎರಚಿ ನಿಷ್ಕ್ರಿಯಗೊಳಿಸಿದ್ದಾರೆ. ಈ ಚಾಲಾಕಿ ಕಳ್ಳತನದಲ್ಲಿ ಈ ಹಿಂದೆ ಅಂಗಡಿಯಲ್ಲಿ ದುಡಿಯುತ್ತಿದ್ದ ಕಾರ್ಮಿಕರೇ  ಭಾಗಿಯಾಗಿರುವ ಸಂದೇಹ ವ್ಯಕ್ತವಾಗಿದ್ದು, ಪೊಲೀಸರು ಅವರ ಮಾಹಿತಿ ಕಲೆ ಹಾಕುತ್ತಿದ್ದಾರೆ. ಘಟನಾ ಸ್ಥಳಕ್ಕೆ ಉಡುಪಿ ಡಿವೈಎಸ್ಪಿ ಪ್ರಭು ಡಿ.ಟಿ., ಉಡುಪಿ ನಗರ ಠಾಣಾ ಪೊಲೀಸ್ ನಿರೀಕ್ಷಕ ಮಂಜುನಾಥ ಭೇಟಿ ನೀಡಿ ಪರಿಶೀಲಿಸಿದ್ದಾರೆ.

- Advertisement -

Latest News

error: Content is protected !!