Saturday, June 27, 2026
Homeಕರಾವಳಿಉಡುಪಿಉಡುಪಿ:  ವೈದ್ಯಕೀಯ ವಿದ್ಯಾರ್ಥಿನಿಯ ಮೊಬೈಲ್ ಹ್ಯಾಕ್ ಮಾಡಿ 3 ಲಕ್ಷದ 70 ಸಾವಿರ ದೋಚಿದ ಸೈಬರ್...

ಉಡುಪಿ:  ವೈದ್ಯಕೀಯ ವಿದ್ಯಾರ್ಥಿನಿಯ ಮೊಬೈಲ್ ಹ್ಯಾಕ್ ಮಾಡಿ 3 ಲಕ್ಷದ 70 ಸಾವಿರ ದೋಚಿದ ಸೈಬರ್ ವಂಚಕರು

- Advertisement -
- Advertisement -

ಉಡುಪಿ:  ವೈದ್ಯಕೀಯ ವಿದ್ಯಾರ್ಥಿನಿಯ ಮೊಬೈಲ್ ಹ್ಯಾಕ್ ಮಾಡಿ ಸೈಬರ್ ವಂಚಕರು 3 ಲಕ್ಷದ 70 ಸಾವಿರ ದೋಚಿದ ಘಟನೆ ಮಣಿಪಾಲದಲ್ಲಿ ನಡೆದಿದೆ.


ಮಣಿಪಾಲದ ವೈದ್ಯಕೀಯ ವಿದ್ಯಾರ್ಥಿನಿಗೆ ದಿನಾಂಕ:18.11.2025 ರಂದು ಮಧ್ಯಾಹ್ನ 7074136042 ನಂಬರಿನಿಂದ ICICI ಬ್ಯಾಂಕಿನ ಏಜೆಂಟ್ ಎಂದು ಕರೆ ಮಾಡಿ ಕ್ರೆಡಿಟ್ ಕಾರ್ಡ್ ಪ್ರೊಟೆಕ್ಷನ್ ಸರ್ವಿಸ್ನಿಂದ ನಿಮ್ಮ ಕಾರ್ಡ್ ಪ್ರೋಟೆಕ್ಷಷನ್ ಸರ್ವಿಸ್ Expire ಆಗಿದೆ ಎಂದು ತಿಳಿಸಿದ್ದಾರೆ. ಈ ವೇಳೆ ವಿಧ್ಯಾರ್ಥಿನಿ ನನಗೆ ಆ ಸರ್ವಿಸ್ ಬೇಡ ಎಂದು ಹೇಳಿದ್ದಾರೆ. ಬಳಿಕ ಪುನಃ ಕರೆ ಮಾಡಿ Google ಲಿ I Mobile Lite App ಎಂದು ಸರ್ಚ್ ಮಾಡುವಂತೆ ತಿಳಿಸಿದ್ದಾರೆ. ವಿಧ್ಯಾರ್ಥಿನಿ ಗೂಗಲ್ ನಲ್ಲಿ ಸರ್ಚ್ ಮಾಡಿದ ಬಳಿಕ ಅವರು ಮೊಬೈಲ್ ಹ್ಯಾಕ್ ಆಗಿದ್ದು, ನಂತರ 8100146420 ನೇ ನಂಬರಿಗೆ ವಿದ್ಯಾರ್ಥಿನಿಯ ನಂಬರ್ Forword ಆಗಿ ವಿಧ್ಯಾರ್ಥಿನಿಯ Savings Account ನಿಂದ ಹಾಗೂ ಕ್ರೆಡಿಟ್ ಕಾರ್ಡ್ ನಿಂದ 3,70,944/- ರೂ ಹಣವನ್ನು ಸೈಬರ್ ವಂಚಕರು ವರ್ಗಾವಣೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ:213/2025 ಕಲಂ:66(c) 66(d) IT Act & 316(2) 318(4) BNS ರಂತೆ ಪ್ರಕರಣ ದಾಖಲಿಸಲಾಗದೆ.

- Advertisement -

Latest News

error: Content is protected !!