ಮಂಗಳೂರು: ಮಂಗಳೂರಿನ ಇಬ್ಬರು ಸೌಂದರ್ಯ ಪ್ರದರ್ಶನದಲ್ಲಿ ಭಾಗವಹಿಸಿ ಮಂಗಳೂರು ಜನರು ಹೆಮ್ಮೆ ಪಡುವಂತೆ ಮಾಡಿದ್ದಾರೆ. ಮಾಡೆಲಿಂಗ್ ಕ್ಷೇತ್ರದಲ್ಲಿ ಸಾಧನೆ ಮಾಡುವುದು ಅಷ್ಟೇನೂ ಸುಲಭದ ಮಾತಲ್ಲ. ಪ್ರತೀದಿನ ಅದಕ್ಕಾಗಿ ಕಷ್ಟ ಪಡಬೇಕು. ಈ ಮಾಡೆಲಿಂಗ್ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ ಅನನ್ಯ ಸಿಂಗ್ ಹಾಗೂ ನಹಶ್ ಶರಣ್.
ಅನನ್ಯಾ ಸಿಂಗ್ ಗ್ಲೋಬಲ್ ಮಿಸ್ ಇಂಟರ್ನ್ಯಾಷನಲ್ ಇಂಡಿಯಾ ಯೂನಿವರ್ಸ್ 2021 ರ ವಿಜಯಶಾಲಿಯಾಗಿದ್ದು, ನಹಶ್ ಶರಣ್ ಗ್ಲೋಬಲ್ ಮಿಸ್ಟರ್ ಇಂಟರ್ನ್ಯಾಷನಲ್ ಇಂಡಿಯಾ ಯೂನಿವರ್ಸ್ 2021 ರಲ್ಲಿ ಎರಡನೇ ರನ್ನರ್-ಅಪ್ ಅನ್ನು ಪಡೆದರು.

ಅನನ್ಯಾ ಸಿಂಗ್ ಮಂಗಳೂರಿನಲ್ಲಿ ಜನಿಸಿದರೂ, ಅವರು ಬೆಳೆದದ್ದು ಡೆಹ್ರಾಡೂನ್ನಲ್ಲಿ. ರಾಜ್‌ಪಾಲ್ ಸಿಂಗ್ ಮತ್ತು ಪ್ರಮೀಳಾ ಬೆಳ್ತಂಗಡಿ ಶೇಷಗಿರಿ ದಂಪತಿಯ ಪುತ್ರಿ ಇವರು. ಅವರು ದೆಹಲಿ ವಿಶ್ವವಿದ್ಯಾಲಯದಿಂದ ಪದವಿಯನ್ನು ಮಾಡಿದ್ದಾರೆ, ಮತ್ತು ಪ್ರಸ್ತುತದಲ್ಲಿ ಅವರ ಮಾಸ್ಟರ್ಸ್ ಅನ್ನು ಸ್ಕೂಲ್ ಆಫ್ ಸೋಷಿಯಲ್ ವರ್ಕ್ ರೋಶಿನಿ ನಿಲಯ” ಇಲ್ಲಿ ಮುಂದುವರೆಸುತ್ತಿದ್ದಾರೆ.

ನಹಶ್ ಶರಣ್ ಮಂಗಳೂರಿನ ಮಾರ್ನಮಿಕಟ್ಟೆಯವರು. ಅವರು ಜೈನ ವಿಶ್ವವಿದ್ಯಾನಿಲಯದಲ್ಲಿ ಬಿಬಿಎ ಕಲಿಯುತ್ತಿದ್ದಾರೆ. ನಹಶ್, ದಿಲೀಪ್ ಕುಮಾರ್ ಮತ್ತು ಸಂಜನಾ ಎನ್ ಎಮ್ ಮಗರಾಗಿದ್ದಾರೆ.

ಮಾಡೆಲಿಂಗ್ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡಬೇಕು ಎಂಬುದು ಇವರ ಕನಸು. ಈ ಪ್ರಶಸ್ತಿ ಲಭಿಸಿದ್ದು ಅವರಿಗೆ ತುಂಬಾ ಖುಷಿ ತಂದುಕೊಟ್ಟಿದೆ.