Saturday, June 6, 2026
Homeಕರಾವಳಿಉಡುಪಿಉಡುಪಿ; ಎಟಿಎಂಗೆ ನುಗ್ಗಿ ಕಳ್ಳತನಕ್ಕೆ ಯತ್ನ ಇಬ್ಬರ ಬಂಧನ

ಉಡುಪಿ; ಎಟಿಎಂಗೆ ನುಗ್ಗಿ ಕಳ್ಳತನಕ್ಕೆ ಯತ್ನ ಇಬ್ಬರ ಬಂಧನ

- Advertisement -
- Advertisement -

ಉಡುಪಿ; ಎಟಿಎಂಗೆ ನುಗ್ಗಿ ಕಳ್ಳತನಕ್ಕೆ ಯತ್ನಿಸಿದ ಇಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ ಉಡುಪಿ ತಾಲೂಕಿನ ಉದ್ಯಾವರದಲ್ಲಿ ನಡೆದಿದೆ. ಅಬೂಬಕ್ಕರ್‌ ಸಿದ್ದಿಕ್‌ ಹಾಗೂ  ಮೊಹಮ್ಮದ್‌ ಯಾಸೀನ್‌ ಬಂಧಿತರು.

ಫೆ.12 ರಂದು ಬೆಳಿಗ್ಗೆ ಸುಮಾರು 2.40 ಗಂಟೆಗೆ ಕಾಪು ಪೊಲೀಸ್‌ ಠಾಣಾ ವ್ಯಾಪ್ತಿಯ ಗ್ರಾಮದ ಉದ್ಯಾವರ ಕೆನರಾ ಬ್ಯಾಂಕ್‌ ATM ನಲ್ಲಿದ್ದ ಹಣವನ್ನು ಕಳ್ಳತನ ಮಾಡಲು ಪ್ರಯತ್ನಿಸಿದ ಆರೋಪಿಗಳ ವಿರುದ್ಧ ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದರಂತೆ ತನಿಖೆ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಬಂಧಿತರಿಂದ ಸ್ಕೂಟಿ, ಜಾಕೆಟ್‌-1, ಹೆಲ್ಮೆಟ್‌-1, ಕ್ಯಾಪ್‌-1, ಹ್ಯಾಂಡ್‌‌ ಗ್ಲೌಸ್‌-1ಜೊತೆ, ಕತ್ತಿ-1, ಹ್ಯಾಮರ್‌- 1 ಹಾಗೂ ಬ್ಯಾಗ್‌ -1 ನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

- Advertisement -

Latest News

error: Content is protected !!