Wednesday, July 15, 2026
Homeಕರಾವಳಿಉಡುಪಿಉಡುಪಿ: ಕಾಂಗ್ರೆಸ್ ಮುಖಂಡನ ಮನೆಯಿಂದ 200 ಕ್ಕೂ ಅಧಿಕ ಬಾಕ್ಸ್ ಗಳ ಗೋವಾ ಮದ್ಯ ವಶ

ಉಡುಪಿ: ಕಾಂಗ್ರೆಸ್ ಮುಖಂಡನ ಮನೆಯಿಂದ 200 ಕ್ಕೂ ಅಧಿಕ ಬಾಕ್ಸ್ ಗಳ ಗೋವಾ ಮದ್ಯ ವಶ

- Advertisement -
- Advertisement -

ಉಡುಪಿ: ಕಾರ್ಕಳ ತಾಲೂಕಿನ ಬೋಳ ಗ್ರಾಮದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಗೋವಾ ಮದ್ಯ ವಶಪಡಿಸಿಕೊಳ್ಳಲಾಗಿದೆ.

ಕಾರ್ಕಳದ ಕಾಂಗ್ರೆಸ್ ಮುಖಂಡ ಅವಿನಾಶ್ ಮಲ್ಲಿ ಎಂಬುವರಿಗೆ ಸಂಬಂಧಿಸಿದ ಎರಡು ಮನೆಗಳಿಂದ ಮದ್ಯದ ಬಾಟಲಿಗಳಿರುವ 200 ಕ್ಕೂ ಅಧಿಕ ಬಾಕ್ಸ್ ಗಳನ್ನು ವಶಪಡಿಸಿಕೊಳ್ಳಲಾಗಿದೆ

ಉಡುಪಿ ಅಬಕಾರಿ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು, ಗೋವಾದಿಂದ ಅಕ್ರಮವಾಗಿ ಮದ್ಯ ತರಿಸಿಕೊಂಡು ಬಾರ್ ಗಳಿಗೆ ಹಾಗೂ ಗ್ರಾಹಕರಿಗೆ ನೀಡುತ್ತಿದ್ದ ಬಗ್ಗೆ ಶಂಕೆ ವ್ಯಕ್ತವಾಗಿದೆ.

ಸದ್ಯ ಅವಿನಾಶ್ ಮಲ್ಲಿ ತಲೆಮರೆಸಿಕೊಂಡಿದ್ದು, ಈ ಹಿಂದೆ ಅವಿನಾಶ್ ಮಲ್ಲಿ ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯನಾಗಿದ್ದ ಎನ್ನಲಾಗಿದೆ.

- Advertisement -

Latest News

error: Content is protected !!