Friday, June 26, 2026
HomeWorldಮೂಡುಬಿದಿರೆ; ಆಳ್ವಾಸ್ ನ ಇಬ್ಬರು ಕ್ರೀಡಾಪಟುಗಳು ಒಲಂಪಿಕ್ಸ್ ಗೆ ಆಯ್ಕೆ!!

ಮೂಡುಬಿದಿರೆ; ಆಳ್ವಾಸ್ ನ ಇಬ್ಬರು ಕ್ರೀಡಾಪಟುಗಳು ಒಲಂಪಿಕ್ಸ್ ಗೆ ಆಯ್ಕೆ!!

- Advertisement -
- Advertisement -

ಮೂಡುಬಿದಿರೆ : ಇದೇ ತಿಂಗಳ 23 ರಂದು ಜಪಾನ್ ನ ಟೋಕಿಯೋದಲ್ಲಿ ಪ್ರಾರಂಭವಾಗಲಿರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ಇಬ್ಬರು ಕ್ರೀಡಾ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಆಳ್ವಾಸ್‌ನ ಕ್ರೀಡಾ ವಿಭಾಗ ದತ್ತು ಶಿಕ್ಷಣದ ಅಡಿಯಲ್ಲಿ ವ್ಯಾಸಂಗ ಮಾಡುತ್ತಿರುವ ಧನಲಕ್ಷ್ಮೀ ಹಾಗೂ ಶುಭಾ ಆಯ್ಕೆಯಾಗಿದ್ದು, ಇವರು 4×400 ಮಿಕ್ಸೆಡ್ ರಿಲೇಯಲ್ಲಿ ದೇಶದ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

2016-17ನೇ ಶೈಕ್ಷಣಿಕ ವರ್ಷದಿಂದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳಾಗಿ ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯಕೂಟಗಳಲ್ಲಿ ಪ್ರತಿನಿಧಿಸಿರುವ ಇವರಿಬ್ಬರು ಈಗಾಗಲೇ ಅನೇಕ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಸ್ಪರ್ಧಿಸಿದ್ದಾರೆ.

ಆಳ್ವಾಸ್ ವಿದ್ಯಾಸಂಸ್ಥೆಯ ಹಲವಾರು ಕ್ರೀಡಾ ವಿದ್ಯಾರ್ಥಿಗಳು ಈಗಾಗಲೇ ಒಲಿಂಪಿಕ್‌ನಲ್ಲಿ ಭಾಗವಹಿಸುವ ಸಾಧನೆ ಮಾಡಿದ್ದು, ಈ ಬಾರಿಯ ಒಲಿಂಪಿಕ್‌ಗೆ ಆಯ್ಕೆಯಾದ ಇಬ್ಬರು ಪ್ರತಿಭಾನ್ವಿತ ಕ್ರೀಡಾ ವಿದ್ಯಾರ್ಥಿಗಳಿಗೆ ಡಾ.ಎಂ.ಮೋಹನ ಆಳ್ವರು ತಲಾ ₹1 ಲಕ್ಷ ಪ್ರೋತ್ಸಾಹಧನ ನೀಡಿದ್ದಾರೆ.

- Advertisement -

Latest News

error: Content is protected !!