Thursday, June 4, 2026
Homeಕರಾವಳಿಮಂಗಳೂರಿನಲ್ಲಿ ಇಬ್ಬರು ಎಂಡಿಎಂಎ ಡ್ರಗ್ ಪೆಡ್ಲರ್ ಗಳು ಅರೆಸ್ಟ್

ಮಂಗಳೂರಿನಲ್ಲಿ ಇಬ್ಬರು ಎಂಡಿಎಂಎ ಡ್ರಗ್ ಪೆಡ್ಲರ್ ಗಳು ಅರೆಸ್ಟ್

- Advertisement -
- Advertisement -

ಮಂಗಳೂರು: ಎಂಡಿಎಂಎ ಡ್ರಗ್ ಪೆಡ್ಲರ್ ಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.ಕಾಟಿಪಳ್ಳ ನಿವಾಸಿಯಾಗಿರುವ ಶಾಕೀಬ್ ಅಲಿಯಾಸ್ ಶಬ್ಬು ಮತ್ತು ಚೊಕ್ಕಬೆಟ್ಟು ನಿವಾಸಿಯಾಗಿರುವ ನಿಸಾರ್ ಹುಸೈನ್ ಅಲಿಯಾಸ್ ನಿಚ್ಚು ಬಂಧಿತ ಪೆಡ್ಲರ್ ಗಳಾಗಿದ್ದು, ಬಂಧಿತರಿಂದ 2.6 ಲಕ್ಷ ರೂಪಾಯಿ ಮೌಲ್ಯದ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ.

ಸುರತ್ಕಲ್ ಸಮೀಪದ ತಡಂಬೈಲ್ ಬೀಚ್ ಬಳಿ ಕಾರಿನಲ್ಲಿ ಎಂಡಿಎಂಎ ಮಾರಾಟ ಮಾಡುತ್ತಿದ್ದಾಗ ಇಬ್ಬರು ಸಿಸಿಬಿ ಬಲೆಗೆ ಬಿದ್ದಿದ್ದಾರೆ.ಬಂಧಿತ ಆರೋಪಿಗಳ ಮೇಲೆ ಈ ಹಿಂದೆ ಹಲ್ಲೆ, ಕೊಲೆ ಯತ್ನ, ಸರಗಳ್ಳತನ, ಮನೆಗಳ್ಳತನ ಮತ್ತು ವಾಹನ ಕಳ್ಳತನ ಸೇರಿದಂತೆ ಹಲವು ಪ್ರಕರಣಗಳು ಕೂಡಾ ದಾಖಲಾಗಿವೆ ಎನ್ನಲಾಗಿದೆ.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!