Friday, June 5, 2026
Homeತಾಜಾ ಸುದ್ದಿಕಣ್ಣಾಮುಚ್ಚಾಲೆ ಆಡುವಾಗ ಐಸ್ ಕ್ರೀಂ ಫ್ರೀಜರ್ ನೊಳಗೆ ಕುಳಿತು ಇಬ್ಬರು ಬಾಲಕಿಯರು ಸಾವು

ಕಣ್ಣಾಮುಚ್ಚಾಲೆ ಆಡುವಾಗ ಐಸ್ ಕ್ರೀಂ ಫ್ರೀಜರ್ ನೊಳಗೆ ಕುಳಿತು ಇಬ್ಬರು ಬಾಲಕಿಯರು ಸಾವು

- Advertisement -
- Advertisement -

ಮೈಸೂರು : ಕಣ್ಣಾಮುಚ್ಚಾಲೆ ಆಟವಾಡುವಾಗ ಐಸ್‌ಕ್ರೀಂ ಫ್ರೀಜರ್‌ನಲ್ಲಿ ಅವಿತುಕೊಳ್ಳಲು ಹೋಗಿ ಬಾಗಿಲು ಬಂದ್‌ ಆಗಿದ್ದರಿಂದ ಇಬ್ಬರು ಬಾಲಕಿಯರು ಉಸಿರುಗಟ್ಟಿ ಮೃತಪಟ್ಟಿರುವ ಘಟನೆ ತಾಲೂಕಿನ ಮಸಗೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ತರಕಾರಿ ನಾಗರಾಜ ನಾಯ್ಕ ಪುತ್ರಿ ಭಾಗ್ಯ (11) ಹಾಗೂ ರಾಜು ನಾಯ್ಕ ಪುತ್ರಿ ಕಾವ್ಯಾ (5) ಮೃತ ದುರ್ದೈವಿಗಳು.

ಗ್ರಾಮದ ನಿವಾಸಿಯೊಬ್ಬರು ಐಸ್‌ಕ್ರೀಂ ಮಾರಾಟಕ್ಕಾಗಿ ವಾಹನದಲ್ಲಿ ಫ್ರೀಜರ್‌ ಇಟ್ಟಿದ್ದು, ಅದನ್ನು ನಾಗರಾಜ ನಾಯ್ಕ ಮನೆ ಸಮೀಪ ನಿಲ್ಲಿಸಿದ್ದರು.ಆಟವಾಡುತ್ತಿದ್ದ ಮಕ್ಕಳು ಫ್ರೀಜರ್‌ ಬಾಗಿಲು ತೆರೆದು ಒಳಗಡೆ ಇಳಿದು ಬಾಗಿಲು ಮುಚ್ಚಿಕೊಂಡಿದ್ದಾರೆ. ಈ ವೇಳೆ ಬಾಗಿಲು ಲಾಕ್‌ ಆಗಿದ್ದರಿಂದ ಅದನ್ನು ತೆಗೆಯಲು ಸಾಧ್ಯವಾಗಿಲ್ಲ. ಅವರು ಒಳಗಡೆ ಇಳಿಯುವುದನ್ನು ಕೂಡ ಯಾರೂ ಗಮನಿಸಿಲ್ಲ. ಹೀಗಾಗಿ ಇಬ್ಬರು ಬಾಲಕಿಯರು ಒಳಗಡೆಯೇ ಉಸಿರುಗಟ್ಟಿ ಕೊನೆಯುಸಿರೆಳೆದಿದ್ದಾರೆ.

- Advertisement -

Latest News

error: Content is protected !!