Sunday, June 7, 2026
Homeಕರಾವಳಿಮಂಗಳೂರುಬಂಟ್ವಾಳ : ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಆಟ ಆಡುತ್ತಿದ್ದಾಗ ದಾಳಿ, ಇಬ್ಬರ ಬಂಧನ

ಬಂಟ್ವಾಳ : ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಆಟ ಆಡುತ್ತಿದ್ದಾಗ ದಾಳಿ, ಇಬ್ಬರ ಬಂಧನ

- Advertisement -
- Advertisement -

ಬಂಟ್ವಾಳ : ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಆಟ ಆಡುತ್ತಿದ್ದಾಗ ಬಂಟ್ವಾಳ ನಗರ ಠಾಣಾ ಪೋಲಿಸರು ದಾಳಿ ಮಾಡಿ , ಇಬ್ಬರನ್ನು ಬಂಧಿಸಿರುವ ಘಟನೆ .ಸಿ.ರೋಡು ಸಮೀಪದ ಕೈಕಂಬ ಎಂಬಲ್ಲಿ ನಡೆದಿದೆ. ನಾವೂರ ನಿವಾಸಿ ಸುರೇಶ್ ಹಾಗೂ ಮಿತ್ತಬೈಲು ನಿವಾಸಿ ಭಾಸ್ಕರ ಬಂಧಿತರು.

ಕೈಕಂಬದಲ್ಲಿ ಖಾಸಗಿ ಕಟ್ಟಡವೊಂದರ ಬಳಿಯಲ್ಲಿ ಆಟಕ್ಕೆ ತಯಾರು ನಡೆಸುತ್ತಿದ್ದ ವೇಳೆ ದಾಳಿ ನಡೆಸಿದ ಪೋಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 3,500 ರೂ ನಗದು ಹಾಗೂ ಆಟಕ್ಕೆ ಬಳಸಿದ ಮಟ್ಕಾ ಎಲೆ,ಹಾಗೂ ಇತರ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

- Advertisement -

Latest News

error: Content is protected !!