Saturday, June 13, 2026
Homeಕರಾವಳಿಗುಂಡ್ಯದಲ್ಲಿ‌ ಅನ್ಯಕೋಮಿನ ಜೋಡಿ ಸಿಕ್ಕಿಬಿದ್ದ ಪ್ರಕರಣಕ್ಕೆ ಟ್ವಿಸ್ಟ್

ಗುಂಡ್ಯದಲ್ಲಿ‌ ಅನ್ಯಕೋಮಿನ ಜೋಡಿ ಸಿಕ್ಕಿಬಿದ್ದ ಪ್ರಕರಣಕ್ಕೆ ಟ್ವಿಸ್ಟ್

- Advertisement -
- Advertisement -

ಗುಂಡ್ಯ: ಇಲ್ಲಿನ ಅರಣ್ಯಪ್ರದೇಶದಲ್ಲಿ ಅನ್ಯಕೋಮಿನ ಜೋಡಿಯೊಂದು ಜೊತೆಯಾಗಿ ಕಾಣಿಸಿಕೊಂಡು ಭಾರೀ ಸುದ್ದಿಯಾಗಿತ್ತು. ಸೋಷಿಯಲ್‌ ಮೀಡಿಯಾದಲ್ಲಿ ಇವರಿಬ್ಬರ ಫೋಟೋ ಹರಿದಾಡಿತ್ತು. ಇದರ ಬೆನ್ನಲ್ಲೇ ಪ್ರಕರಣ ತಿರುವು ಪಡೆದುಕೊಂಡಿದೆ.

ಹೌದು. ಇದೀಗ ನಿನ್ನ ಸಿಕ್ಕಿಬಿದ್ದ ಪುತ್ತೂರಿನ ಆರ್ಯಾಪಿನ ರಿಕ್ಷಾ ಚಾಲಕ ನಝೀರ್ (21) ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ನಾನು ಪ್ರೀತಿಸುತ್ತಿದ್ದ ಯುವತಿಯನ್ನು ಆಟೋರಿಕ್ಷಾದಲ್ಲಿ ಕರೆದುಕೊಂಡು ಹೋಗುತ್ತಿದ್ದ ವೇಳೆ ಸಿರಿಬಾಗಿಲು ಗ್ರಾಮದ ದೇರಣೆ ಎಂಬಲ್ಲಿ ಸುರೇಂದ್ರ, ತೀರ್ಥಪ್ರಸಾದ್, ಜಿತೇಶ್ ಹಾಗೂ ಇತರರು ಆಟೋರಿಕ್ಷಾವನ್ನು ತಡೆದು ಹಲ್ಲೆ ನಡೆಸಿದ್ದಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾನೆ.

ಈ ಹಿನ್ನೆಲೆಯಲ್ಲಿ ಉಪ್ಪಿನಂಗಡಿ ಪೊಲೀಸರು ಕಡಬ ತಾಲೂಕಿನ ಸಿರಿಬಾಗಿಲು ಗ್ರಾಮದ ಅನಿಲ ನಿವಾಸಿ ಬಾಲಚಂದ್ರ(35) ಹಾಗೂ ದೇರಣೆ ನಿವಾಸಿ ರಂಜಿತ್(31) ಎಂಬವರನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Latest News

error: Content is protected !!