Friday, April 19, 2024
Homeಕರಾವಳಿಮಂಗಳೂರಿನ ಕುಕ್ಕರ್ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಬಯಲಾಗಿದೆ ಸ್ಫೋಟಕ ಮಾಹಿತಿ

ಮಂಗಳೂರಿನ ಕುಕ್ಕರ್ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಬಯಲಾಗಿದೆ ಸ್ಫೋಟಕ ಮಾಹಿತಿ

spot_img
- Advertisement -
- Advertisement -

ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಹಲವು ಸ್ಪೋಟಕ ಮಾಹಿತಿಗಳು ಬಯಲಾಗಿವೆ,ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣ ಹಿಂದೆ ಆಟೋ ಚಾಲಕ ಸೇರಿ ಹಲವರ ಹತ್ಯೆಗೆ ಸಂಚು ನಡೆಸಲಾಗಿತ್ತು ಅನ್ನೋದು ಗೊತ್ತಾಗಿದೆ.

ಆಟೋ ಚಾಲಕ ಸೇರಿ ಇತರರನ್ನು ಕೊಲೆ ಮಾಡುವ ಉದ್ದೇಶದಿಂದ ಕುಕ್ಕರ್ ಬಾಂಬ್ ಸ್ಫೋಟ ಮಾಡಬೇಕೆಂಬ ಸಂಚು ರೂಪಿಸಿದ್ದನು ಈ ಶಾರೀಖ್. ಇದಲ್ಲದೇ ದೊಡ್ಡ ಮಟ್ಟದ ಒಳಸಂಚನು ರೂಪಿಸಿದ್ದನು ಎಂಬುದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

ಇನ್ನು ಶಾರೀಕ್ ಮುಸ್ಲಿಂ ಯುವಕರನ್ನು ಸೆಳೆಯಲು ಸೆಕ್ಸ್ ವೀಡಿಯೋವನ್ನು ಕಳುಹಿಸುತ್ತಿದ್ದ ವಿಚಾರ ಪೊಲೀಸ್ ತನಿಖೆಯಿಂದ ಗೊತ್ತಾಗಿದೆ.ಸೆಕ್ಸ್ ವಿಡಿಯೋಗಳಿಂದಲೇ ಕರಾವಳಿ ಭಾಗದ ಹಲವು ಮುಸ್ಲಿಂ ಯುವಕರನ್ನು ಉಗ್ರ ಚಟುವಟಿಕೆಗೆ ಸೇರಿಸಿದ್ದಾನೆ ಎಂಬ ಮಾಹಿತಿ ಪೊಲೀಸ್ ತನಿಖೆಯಿಂದ ಹೊರ ಬಿದ್ದಿದೆ ಎನ್ನಲಾಗಿದೆ.

ಶಂಕಿತ ಉಗ್ರ ಶಾರೀಖ್ ಮೊಬೈಲ್ ನಲ್ಲಿ ಬರೋಬ್ಬರಿ 500 ಕ್ಕೂ ಹೆಚ್ಚು ಸೆಕ್ಸ್ ವೀಡಿಯೋಗಳು ಪತ್ತೆಯಾಗಿದ್ದು, ಇದನ್ನೇ ಅಸ್ತ್ರವನ್ನಾಗಿಸಿ ಈತ ನೂರಾರು ಮುಸ್ಲಿಂ ಯುವಕರನ್ನು ಉಗ್ರ ಚಟುವಟಿಕೆಗೆ ಸೇರಿಸಿದ್ದಾನೆ ಎಂಬ ಮಾಹಿತಿ ಪೊಲೀಸ್ ತನಿಖೆಯಿಂದ ಹೊರ ಬಿದ್ದಿದೆ ಎನ್ನಲಾಗಿದೆ. ಶಾರೀಕ್ ಹತ್ತಕ್ಕೂ ಹೆಚ್ಚು ಪೋನ್ಗಳನ್ನು ಹೊಂದಿದ್ದು, ಅದನ್ನು ಬಳಕೆ ಮಾಡಿದ ನಂತರ ಮೊಬೈಲನ್ನು ಮಾರಾಟ ಮಾಡುತ್ತಿದ್ದನು ಎನ್ನಲಾಗಿದೆ.

ಮೊದಲು ಯುವಕರ ಮೊಬೈಲ್ ನಂಬರ್ ಕಲೆಹಾಕಿ ಅವರ ಮೊಬೈಲ್ ಗೆ ಸೆಕ್ಸ್ ವಿಡಿಯೋ ಕಳುಹಿಸಿ ಅವರ ಪರಿಚಯ ಮಾಡಿಕೊಂಡು ಇನ್ನಷ್ಟು ಸಲುಗೆ ಬೆಳೆಸಿ ಭಯೋತ್ಪಾದನೆ ವಿಡಿಯೋ ಕಳುಹಿಸುತ್ತಿದ್ದರು. ನಂತರ ಅವರನ್ನು ಭೇಟಿಯಾಗಿ ಉಗ್ರ ಚಟುವಟಿಕೆಗೆ ಸೇರಿಸುತ್ತಿದ್ದನು ಎಂಬ ಸ್ಪೋಟಕ ಮಾಹಿತಿ ಬಯಲಾಗಿದೆ.

ಇನ್ನೂ, ಮತಾಂಧ ಮನಃಸ್ಥಿತಿಯನ್ನು ಹೊಂದಿದ್ದ ಮಹಮ್ಮದ್ ಶಾರೀಕ್ನ ಮೊಬೈಲ್ನಲ್ಲಿ 1 ಸಾವಿರಕ್ಕೂ ಹೆಚ್ಚು ಜಿಹಾದಿ ವೀಡಿಯೋಗಳು ಪತ್ತೆಯಾಗಿವೆ.ಐಸಿಸ್ ಉಗ್ರರ ವಿಧ್ವಂಸಕ ಕೃತ್ಯಗಳ ವೀಡಿಯೋ ಸೇರಿದಂತೆ 55 ಜಿಬಿಗೂ ಅಧಿಕ ವೀಡಿಯೋ, ಪೊಟೋಗಳು ಆತನ ಮೊಬೈಲ್ ಮತ್ತು ಪೆನ್ಡ್ರೈವ್ನಲ್ಲಿ ಪತ್ತೆಯಾಗಿವೆ ಎನ್ನಲಾಗಿದೆ.

- Advertisement -
spot_img

Latest News

error: Content is protected !!