Friday, June 5, 2026
Homeಉತ್ತರ ಕನ್ನಡಭಟ್ಕಳದಲ್ಲಿ ಬಾಲಕನ ಕಿಡ್ನ್ಯಾಪ್ ಪ್ರಕರಣಕ್ಕೆ ಟ್ವಿಸ್ಟ್: ಬಾಲಕನನ್ನು ಅಪಹರಣ ಮಾಡಿಸಿದ್ದ್ಯಾರು‌ ಗೊತ್ತಾ?

ಭಟ್ಕಳದಲ್ಲಿ ಬಾಲಕನ ಕಿಡ್ನ್ಯಾಪ್ ಪ್ರಕರಣಕ್ಕೆ ಟ್ವಿಸ್ಟ್: ಬಾಲಕನನ್ನು ಅಪಹರಣ ಮಾಡಿಸಿದ್ದ್ಯಾರು‌ ಗೊತ್ತಾ?

- Advertisement -
- Advertisement -

ಭಟ್ಕಳ: ಭಟ್ಕಳದಲ್ಲಿ  ಅಂಗಡಿಗೆ ಹೋಗಿದ್ದ 8 ವರ್ಷದ ಬಾಲಕನ‌ನ್ನು  ಕಿಡ್ನ್ಯಾಪ್ ಮಾಡಿದ ಕೇಸಿಗೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು  ಬಂಧಿಸಿದ್ದಾರೆ.

ಅಲಿ ಇಸ್ಲಾಂ ಸಾದಾ(8)ಎಂಬ ಬಾಲಕ ಎರಡು ದಿನಗಳ ಹಿಂದೆ ಅಪಹರಣಕ್ಕೊಳಗಾಗಿದ್ದು, ಬಾಲಕನನ್ನು ಕಾರಿನಲ್ಲಿ ಬಂದು ಕಿಡ್ನಾಪ್ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

ಮುಹಮ್ಮದ್ ಅನೀಸ್,ಅಬ್ರಾರ್ ಶೇಖ್,ಮುಹಮ್ಮದ್ ಬಂಧಿತರು.ಮೂವರು ಆರೋಪಿಗಳು ಬಾಲಕನ ತಾಯಿಯ‌ ಮಾವನ ಸೂಚನೆಯಂತ ಅಪಹರಿಸಿದ್ದರು.ಈ ಕೇಸ್ ನ ಮುಖ್ಯ ಆರೋಪಿ ಬಾಲಕನ ತಾಯಿಯ ಮಾವ ಈಗ ಸೌದಿಯಲ್ಲಿದ್ದಾರೆ.ಅಲ್ಲೇ ಇದ್ದುಕೊಂಡು ಬಾಲಕನ‌ ಕಿಡ್ನಾಪ್ ಗೆ ಸೂಚಿಸಿದ್ದರು ಎನ್ನಲಾಗಿದೆ.

- Advertisement -

Latest News

error: Content is protected !!