- Advertisement -
- Advertisement -
ಚಿಕ್ಕಮಗಳೂರು; ಬೀಟಮ್ಮ ಗ್ಯಾಂಗಿನ ಸಲಗ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೆಸ್ಕಾಂನ ಮೂವರು ಅಧಿಕಾರಿಗಳ ವಿರುದ್ದ ಪ್ರಕರಣ ದಾಖಲಾಗಿದೆ.
ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಆಲ್ದೂರು ಸಮೀಪ ವಿದ್ಯುತ್ ತಂತಿ ಕಾಡಾನೆ ತಗುಲಿ ಮೃತಪಟ್ಟಿತ್ತು. ಅರಣ್ಯಾಧಿಕಾರಿ ಹರೀಶ್ ದೂರಿನ ಮೆಸ್ಕಾಂನ ಮೂವರು ಅಧಿಕಾರಿಗಳ ವಿರುದ್ದ ಪ್ರಕರಣ ದಾಖಲಾಗಿತ್ತು. ಅರಣ್ಯ ಇಲಾಖೆಯಲ್ಲಿ ಮೆಸ್ಕಾಂ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು.ಮೆಸ್ಕಾಂನ ಜ್ಯೂನಿಯರ್ ಎಂಜಿನಿಯರ್, ಅಸಿಸ್ಟೆಂಟ್ ಎಂಜಿನಿಯರ್, ಎಕ್ಸಿಕ್ಯೂಟಿವ್ ಎಂಜಿನಿಯರ್ ವಿರುದ್ಧ ಪ್ರಕರಣ ದಾಖಲಾಗಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.
- Advertisement -