Thursday, June 4, 2026
Homeಕರಾವಳಿಉಡುಪಿಅರಬ್ಬಿ ಸಮುದ್ರ ಪ್ರಕ್ಷುಬ್ಧಗೊಂಡಿರುವ ಹಿನ್ನೆಲೆ: ಮಲ್ಪೆ ಬೀಚ್ ಗೆ ಪ್ರವಾಸಿಗರಿಗೆ ನಿರ್ಬಂಧ

ಅರಬ್ಬಿ ಸಮುದ್ರ ಪ್ರಕ್ಷುಬ್ಧಗೊಂಡಿರುವ ಹಿನ್ನೆಲೆ: ಮಲ್ಪೆ ಬೀಚ್ ಗೆ ಪ್ರವಾಸಿಗರಿಗೆ ನಿರ್ಬಂಧ

- Advertisement -
- Advertisement -

ಉಡುಪಿ: ಚಂಡಮಾರುತದ ಪರಿಣಾಮವಾಗಿ ಅರಬ್ಬಿ ಸಮುದ್ರ ಪ್ರಕ್ಷುಬ್ಧಗೊಂಡಿರುವ ಹಿನ್ನಲೆಯಲ್ಲಿ ಉಡುಪಿಯ ಮಲ್ಪೆ ಬೀಚ್ ಗೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ.

ಮುಂಜಾಗ್ರತಾ ಕ್ರಮವಾಗಿ ಬೀಚ್ ಚಟುವಟಿಕೆ ಸ್ಥಗಿತಗೊಳಿಸಲಾಗಿದ್ದು, ಪ್ರವಾಸಿಗರಿಗೆ ಕಡಲಿಗೆ ಇಳಿಯದಂತೆ ಸೂಚನೆ ನೀಡಲಾಗಿದೆ.

ಬಂಗಾಳಕೊಲ್ಲಿಯಲ್ಲಿ ಅಸಾನಿ‌ ಚಂಡಮಾರುತದ ಅಬ್ಬರದ ಕಾರಣದಿಂದಾಗಿ ಅರಬ್ಬಿ ಸಮುದ್ರದಲ್ಲಿ ತೀವ್ರ ತರಹದ ಗಾಳಿ ಜೊತೆಗೆ ಬೃಹತ್ ಅಲೆಗಳು ಉಂಟಾಗಿವೆ.

ಮುಂಜಾಗ್ರತಾ ಕ್ರಮವಾಗಿ ಕಡಲ ತೀರ ಜಲಕ್ರೀಡೆಗಳು ಬಂದ್ ಆಗಿದ್ದು, ಮಲ್ಪೆ ಸೈಂಟ್ ಮೇರಿಸ್ ದ್ವೀಪದ ಭೇಟಿಗೂ ಬೀಚ್ ಅಭಿವೃದ್ಧಿ ಸಮಿತಿ ನಿರ್ಬಂಧ ಹೇರಿದೆ.

ಜಿಲ್ಲಾಡಳಿದ ಮುಂದಿನ ಆದೇಶದ ವರೆಗೆ ಮಲ್ಪೆ ಬೀಚ್ ಬಂದ್ ಮಾಡಲಾಗಿದ್ದು, ಧ್ವನಿವರ್ಧಕ, ಫಲಕ ಅಳವಡಿಸಿ ಸಮುದ್ರ ಇಳಿಯದಂತೆ ಪ್ರವಾಸಿಗರಿಗೆ ಎಚ್ಚರಿಕೆ ನೀಡಲಾಗಿದೆ.

- Advertisement -

Latest News

error: Content is protected !!