Saturday, June 6, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಪ್ರವಾಸಿ ತಾಣಗಳಾದ ಗಡಾಯಿಕಲ್ಲು &ಜಲಪಾತಗಳು ನಾಳೆಯಿಂದ ಪ್ರವಾಸಿಗರ ಪ್ರವೇಶಕ್ಕೆ ಅನುಮತಿ

ಬೆಳ್ತಂಗಡಿ : ಪ್ರವಾಸಿ ತಾಣಗಳಾದ ಗಡಾಯಿಕಲ್ಲು &ಜಲಪಾತಗಳು ನಾಳೆಯಿಂದ ಪ್ರವಾಸಿಗರ ಪ್ರವೇಶಕ್ಕೆ ಅನುಮತಿ

- Advertisement -
- Advertisement -

ಬೆಳ್ತಂಗಡಿ : ಗಡಾಯಿಕಲ್ಲು,ಕಡಮಗುಂಡಿ, ಬೊಳ್ಳೆ ಜಲಪಾತ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಗೆ ಜೂ.7 ರಿಂದ ಎಂದಿನಂತೆ ಪ್ರವೇಶ ಮಾಡಲು ಅನುಮತಿ ನೀಡಲಾಗಿದೆ ಎಂದು ಬೆಳ್ತಂಗಡಿ ವಲಯ ವನ್ಯಜೀವಿ ವಿಭಾಗದಿಂದ ಮಹಾ ಎಕ್ಸ್‌ಪ್ರೆಸ್ ವೆಬ್ ಸೈಟ್ ಗೆ ಅಧಿಕೃತವಾಗಿ ಮಾಹಿತಿ ಲಭ್ಯವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ಹವಮಾನ ಇಲಾಖೆಯ ಮುನ್ಸೂಚನೆಯಂತೆ ರೆಡ್ ಅಲರ್ಟ್ ಘೋಷಣೆಯಾಗಿದ್ದರಿಂದ ಜಲಪಾತ ಪ್ರದೇಶದ ಸುತ್ತಮುತ್ತ ತೀರಾ ಕಡಿದಾದ ಕಲ್ಲು ಬಂಡೆಗಳಿದ್ದು, ಘಾಟಿ ಪ್ರದೇಶದಲ್ಲಿ ವಿಪರೀತ ಮಳೆಯಾಗುತ್ತಿದು, ಎಲ್ಲಾ ನದಿ ಹಳ್ಳಗಳು ಉಕ್ಕಿ ಹರಿಯುತ್ತಿದ್ದು ಒಳ ಹರಿವು ಜಾಸ್ತಿ ಇರುವುದರಿಂದ ಪ್ರವಾಸಿಗರ ಚಾರಣಕ್ಕೆ ಮೇ.31 ರಂದು ಮುಂದಿನ ಆದೇಶದವರೆಗೆ ಪ್ರವೇಶವನ್ನು ನಿಷೇಧ ಮಾಡಿ ಆದೇಶ ಮಾಡಿದ್ದರು. ಇದೀಗ ಜೂ.7 ರಿಂದ ಬೆಳ್ತಂಗಡಿಯ ಗಡಾಯಿಕಲ್ಲು, ಕಡಮಗುಂಡಿ, ಬೊಳ್ಳೆ ಜಲಪಾತ ಪ್ರವಾಸಿ ತಾಣಗಳಲ್ಲಿ ಮಳೆ ಕಡಿಮೆಯಾದ ಕಾರಣದಿಂದ ನಾಳೆಯಿಂದ ಪ್ರವಾಸಿಗರಿಗೆ ಎಂದಿನಂತೆ ಪ್ರವೇಶಿಸಲು ವನ್ಯಜೀವಿ ವಿಭಾಗದ ಬೆಳ್ತಂಗಡಿ ವಲಯದಿಂದ ಅನುಮತಿ ನೀಡಲಾಗಿದೆ‌.

- Advertisement -

Latest News

error: Content is protected !!