Saturday, May 4, 2024
Homeಕರಾವಳಿಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ; ಮಟನ್ ಕತ್ತರಿಸುತ್ತಿರುವಾಗಲೇ ಮತ್ತೋರ್ವ ಆರೋಪಿಯನ್ನು ಬಂಧಿಸಿದ ಎನ್...

ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ; ಮಟನ್ ಕತ್ತರಿಸುತ್ತಿರುವಾಗಲೇ ಮತ್ತೋರ್ವ ಆರೋಪಿಯನ್ನು ಬಂಧಿಸಿದ ಎನ್ ಐ ಎ ಅಧಿಕಾರಿಗಳು

spot_img
- Advertisement -
- Advertisement -

ಬೆಂಗಳೂರು: ಬಿಜೆಪಿ ಯುವ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಐ ಎ ಅಧಿಕಾರಿಗಳು ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಪಿಎಫ್‌ಐ ಸದಸ್ಯ ಮಡಿಕೇರಿ ಮೂಲದ ತೌಫಿಲ್‌ನನ್ನು  ಶನಿವಾರ ರಾತ್ರಿ ಅಮೃತಹಳ್ಳಿ ಠಾಣೆ ವ್ಯಾಪ್ತಿಯ ದಾಸರಹಳ್ಳಿಯಲ್ಲಿ ಎನ್ ಐ ಎ ಅಧಿಕಾರಿಗಳು ಬಂಧಿಸಿದ್ದಾರೆ. ಎನ್ಐಎ ಅಧಿಕಾರಿಗಳು ಆರೋಪಿ ಪತ್ತೆಗೆ ಈ ಹಿಂದೆ ರೂಪಾಯಿ 5 ಲಕ್ಷ ಹಣ ಬಹುಮಾನ ಘೋಷಣೆ ಮಾಡಿದ್ದರು. ನಿನ್ನೆ ಖಚಿತ ಮಾಹಿತಿ ಮೇರೆಗೆ ಸುಮಾರು 10ಕ್ಕೂ ಹೆಚ್ಚು ಎನ್​ಐಎ ಅಧಿಕಾರಿಗಳು ತೌಫಿಲ್ ಮನೆ ಬಳಿಗೆ ಹೋಗಿದ್ದಾರೆ. ನಂತರ ಇಬ್ಬರು ಅಧಿಕಾರಿಗಳು ಫ್ಲಂಬರ್ ಅಂತ ಕೈಯಲ್ಲಿ ರಿಂಚ್ ಹಿಡಿದು ಮನೆ ಒಳಗೆ ಹೋಗಿದ್ದಾರೆ. ಈ ವೇಳೆ ತೌಫಿಲ್ ಮಟನ್​ ಕತ್ತರಿಸುತ್ತಿರುವುದು ಕಂಡುಬಂದಿದೆ.

ನಂತರ ಮತ್ತಿಬ್ಬರು ಒಳಗೆ ಬಂದಿದ್ದನ್ನು ನೋಡಿದ ತೌಘಿಲ್​​, ಚಾಕುವಿನಿಂದ ಹಲ್ಲೆ ಮಾಡಲು ಯತ್ನಿಸಿದ್ದಾನೆ. ಇದನ್ನು ತಿಳಿದ ಉಳಿದ ಅಧಿಕಾರಿಗಳು ಏಕಕಾಲಕ್ಕೆ ಒಳಗೆ ಬಂದು ತೌಘಿಲ್​ನನ್ನು ಲಾಕ್​ ಮಾಡಿ, ವಶಕ್ಕೆ ಪಡೆದುಕೊಂಡಿದ್ದಾರೆಂದು ತಿಳಿದುಬಂದಿದೆ.

- Advertisement -
spot_img

Latest News

error: Content is protected !!