Saturday, June 6, 2026
Homeಕರಾವಳಿಉಡುಪಿಇವತ್ತು ಮಂಗಳೂರಿನಲ್ಲಿ ಭರ್ಜರಿ ರನ್ ಬಾರಿಸಿದ ಕೊರೊನಾ, ಬರೋಬ್ಬರಿ 83 ಪ್ರಕರಣಗಳು, ಇಬ್ಬರನ್ನು ಬಲಿ ಪಡೆದ...

ಇವತ್ತು ಮಂಗಳೂರಿನಲ್ಲಿ ಭರ್ಜರಿ ರನ್ ಬಾರಿಸಿದ ಕೊರೊನಾ, ಬರೋಬ್ಬರಿ 83 ಪ್ರಕರಣಗಳು, ಇಬ್ಬರನ್ನು ಬಲಿ ಪಡೆದ ಮಹಾಮಾರಿ, ಉಡುಪಿಯಲ್ಲಿ 28 ಪಾಸಿಟಿವ್ ಕೇಸ್

- Advertisement -
- Advertisement -

ಮಂಗಳೂರು : ಇಂದು ಮಂಗಳೂರಿನಲ್ಲಿ  83  ಕೇಸುಗಳು ಪತ್ತೆಯಾಗಿವೆ, ದಿನೇ ದಿನೇ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿರೋದು ನೋಡಿದ್ರೆ ಸೋಂಕು ಸಮುದಾಯಕ್ಕೆ ಹರಡಿದೆ ಅನ್ನೋದು ಸ್ಪಷ್ಟವಾಗುತ್ತಿದೆ.

ಬೆಂಗಳೂರಿನಲ್ಲಿ ಇವತ್ತು 83 ಪಾಸಿಟಿವ್ ಕೇಸುಗಳು ಪತ್ತೆಯಾಗಿದ್ದರೆ, ಇಬ್ಬರನ್ನು ಕೊರೊನಾ ಬಲಿ ಪಡೆದುಕೊಂಡಿದೆ. ಇನ್ನು ಇವತ್ತು ಆಸ್ಪತ್ರೆಯಿಂದ 26 ಮಂದಿ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಇದುವರೆಗೂ ಜಿಲ್ಲೆಯಲ್ಲಿ ಒಟ್ಟು 1351 ಪಾಸಿಟಿವ್ ಕೇಸುಗಳು ಬಂದಿದ್ದು , ಒಟ್ಟು 650 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ ಜಿಲ್ಲೆಯಲ್ಲಿ 677 ಸಕ್ರೀಯ ಪ್ರಕರಣಗಳಿವೆ. ಹಾಗೇ ಇದುವರೆಗೂ ಒಟ್ಟು 24 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.

ಇನ್ನು ಉಡುಪಿಯಲ್ಲಿ ಇವತ್ತು 28 ಕೇಸುಗಳು ವರದಿಯಾಗಿದ್ರೆ, 28 ಮಂದಿ ಆಸ್ಪತ್ರೆಯಿಂದ ಈ ದಿನ ಡಿಸ್ಟಾರ್ಜ್ ಆಗಿದ್ದಾರೆ. ಇದುವೆರಗೂ ಜಿಲ್ಲೆಯಲ್ಲಿ 1389 ಪಾಸಿಟಿವ್ ಕೇಸುಗಳು ಪತ್ತೆಯಾಗಿದ್ರೆ, 1171 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ 215 ಸಕ್ರೀಯ ಕೇಸುಗಳಿದ್ದು, ಜಿಲ್ಲೆಯಲ್ಲಿ ಇದುವೆರಗೂ ಮೂವರನ್ನು ಬಲಿ ಪಡೆದಿದೆ ಕೊರೊನಾ.

- Advertisement -

Latest News

error: Content is protected !!