Saturday, June 6, 2026
Homeತಾಜಾ ಸುದ್ದಿಖುಷ್ಬೂ ಬಿಜೆಪಿ ಸೇರ್ಪಡೆ ಬೆನ್ನಲ್ಲೇ, ಕಮಲದ ಕೈ ಹಿಡಿಯಲಿದ್ದಾರೆ ಮತ್ತೋರ್ವ ಖ್ಯಾತ ನಟಿ

ಖುಷ್ಬೂ ಬಿಜೆಪಿ ಸೇರ್ಪಡೆ ಬೆನ್ನಲ್ಲೇ, ಕಮಲದ ಕೈ ಹಿಡಿಯಲಿದ್ದಾರೆ ಮತ್ತೋರ್ವ ಖ್ಯಾತ ನಟಿ

- Advertisement -
- Advertisement -

ನವದೆಹಲಿ: ಮೊನ್ನೆಯಷ್ಟೇ ನಟಿ ಖುಷ್ಬೂ ಕಾಂಗ್ರೆಸ್ ಗೆ ಕೈ ಕೊಟ್ಟು ಕಮಲದ ಕೈ ಹಿಡಿದಿದ್ದರು. ಇದೀಗ ಮತ್ತೋರ್ವ ಪ್ರಸಿದ್ಧ ನಟಿ, ಮಾಜಿ ಸಂಸದೆ ವಿಜಯಶಾಂತಿ ಅವರು ಬಿಜೆಪಿ ಸೇರ್ಪಡೆಗೊಳ್ಳುವುದು ಖಚಿತವಾಗಿದ್ದು, ನಾಳೆ ಮುಹೂರ್ತ ಫಿಕ್ಸ್​ ಆಗಿದೆ ಎನ್ನಲಾಗಿದೆ

ಕಾಂಗ್ರೆಸ್​ನ ಸಂಸದೆಯಾಗಿದ್ದ ವಿಜಯಶಾಂತಿ, ಕಾಂಗ್ರೆಸ್​ನ ಸ್ಟಾರ್ ಪ್ರಚಾರಕಿ ಎಂದೇ ಗುರುತಿಸಿಕೊಂಡವರು. ಇವರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದು ಕೆಲವು ತಿಂಗಳಿನಿಂದ ಸುದ್ದಿ ಹರಿದಾಡಿತ್ತು. ಆದರೆ ಇದೀಗ ಇದು ಬಹುತೇಕ ಖಚಿತವಾಗಿದ್ದು, ನಾಳೆ ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗುತ್ತಿರುವುದಾಗಿ ಮೂಲಗಳು ಹೇಳಿವೆ.

ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್​ನ (ಜಿಎಚ್​ಎಂಸಿ) 150 ವಾರ್ಡ್​ಗಳಿಗೆ ಬರುವ ಡಿಸೆಂಬರ್​ 1ರಿಂದ ಚುನಾವಣೆ ನಡೆಯಲಿದ್ದು, ಈ ಸಂದರ್ಭದಲ್ಲಿಯೇ ವಿಜಯಶಾಂತಿಯವರು ಬಿಜೆಪಿ ಸೇರುವ ಮೂಲಕ ಪಕ್ಷದ ಪ್ರಚಾರಕ್ಕೆ ಆನೆಬಲ ಬಂದಂತಾಗಿದೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.

- Advertisement -

Latest News

error: Content is protected !!