Sunday, June 7, 2026
Homeಕರಾವಳಿಕುಕ್ಕೆ ಸುಬ್ರಹ್ಮಣ್ಯಕ್ಕೆ ಟಾಲಿವುಡ್ ನಟ ಪವನ್ ಕಲ್ಯಾಣ್ ಭೇಟಿ

ಕುಕ್ಕೆ ಸುಬ್ರಹ್ಮಣ್ಯಕ್ಕೆ ಟಾಲಿವುಡ್ ನಟ ಪವನ್ ಕಲ್ಯಾಣ್ ಭೇಟಿ

- Advertisement -
- Advertisement -

ಸುಬ್ರಹ್ಮಣ್ಯ: ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಟಾಲಿವುಡ್ ನಟ ಪವನ್ ಕಲ್ಯಾಣ್ ಭೇಟಿ ನೀಡಿದ್ದಾರೆ. ಕಡಬ ತಾಲೂಕಿನಲ್ಲಿರುವ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಈ ವೇಳೆ ಆಡಳಿತ ಮಂಡಳಿಯಿಂದ ಪವನ್ ಕಲ್ಯಾಣ್ ಗೆ ಸನ್ಮಾನ ನಡೆಸಲಾಗಿದೆ. ದೇವರ ದರ್ಶನ ಪಡೆದು ಪವನ್ ಕಲ್ಯಾಣ್ ಮಹಾಪೂಜೆ, ಆಶ್ಲೇಷಾ ಬಲಿ ಪೂಜೆ ಹಾಗು ಆದಿ ಸುಬ್ರಹ್ಮಣ್ಯ ದೇವಾಲಯದಲ್ಲಿ ವಸ್ತ್ರ ಸಮರ್ಪಣೆ ಮಾಡಿದರು.

ದೇವಾಲಯದ 500ಕ್ಕೂ ಮಿಕ್ಕಿದ ನೌಕರರು ಆಡಳಿತ ಮಂಡಳಿಯೊಂದಿಗೆ ಸೇರಿ ಪ್ರತಿ ಏಕಾದಶಿಯಂದು ನಡೆಯುವ ಸ್ವಚ್ಛ ಮಂದಿರ ಸೇವಾ ಅಭಿಯಾನದ ಬಗ್ಗೆ ಪವನ್ ಕಲ್ಯಾಣ್ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ದೇವಾಲಯದ ಮಾಸ್ಟರ್ ಪ್ಲಾನಿನಲ್ಲಿ ತೆಗೆದುಕೊಳ್ಳಲು ನಿರ್ಣಯಿಸಿರುವ ಕಟ್ಟಡಗಳ ಬಗ್ಗೆ ಕೂಡಾ ಮೆಚ್ಚುಗೆ ವ್ಯಕ್ತಪಡಿಸಿದರು.

- Advertisement -

Latest News

error: Content is protected !!