Sunday, May 5, 2024
Homeಕರಾವಳಿಕರಾವಳಿಯ ಟೋಲ್ ಪ್ಲಾಜಾಗಳಲ್ಲಿ ವಾಹನಗಳ ಸುಂಕ ಹೆಚ್ಚಳ

ಕರಾವಳಿಯ ಟೋಲ್ ಪ್ಲಾಜಾಗಳಲ್ಲಿ ವಾಹನಗಳ ಸುಂಕ ಹೆಚ್ಚಳ

spot_img
- Advertisement -
- Advertisement -

ಮಂಗಳೂರು: ನಗರದ ಹೊರವಲಯದ ಸುರತ್ಕಲ್ ಎನ್‌ಐಟಿಕೆ ಟೋಲ್‌ಗೇಟ್‌ನಲ್ಲಿ ಮತ್ತೆ ಒಂದು ವರ್ಷಕ್ಕೆ ಶುಲ್ಕ ಸಂಗ್ರಹಕ್ಕೆ ಟೆಂಡರ್ ಕರೆಯಲಾಗಿದೆ.ಇದೇ ವೇಳೆ ಇಂದಿನಿಂದ ಕರಾವಳಿಯಲ್ಲಿ ಇರುವ ಟೋಲ್ ಪ್ಲಾಜಾಗಳಲ್ಲಿ ವಾಹನಗಳ ಸುಂಕ ಹೆಚ್ಚಳವಾಗಲಿದೆ.


ಸುರತ್ಕಲ್ ಟೋಲ್ ಅವೈಜ್ಞಾನಿಕವಾಗಿದ್ದು ಅದನ್ನು ತೆರವುಗೊಳಿಸುವಂತೆ ನಾಗರಿಕರ ಪ್ರತಿಭಟನೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಈ ಟೋಲ್‌ಗೇಟ್‌ನ್ನು ಎನ್‌ಎಂಪಿಎಗೆ ಸ್ಥಳಾಂತರಗೊಳಿಸುವುದಾಗಿ ಸಂಸದ ನಳಿನ್ ಕುಮಾರ್ ಕಟೀಲ್ ಮನವಿಗೆ ಸ್ಪಂದನ ಸಿಕ್ಕಿತ್ತು ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಭರವಸೆ ನೀಡಿದ್ದರು. ಇನ್ನು ಮುಂದೆ 60 ಕಿ.ಮೀ.60 ಕಿ.ಮೀ.ಅಂತರದಲ್ಲಿ ಮಾತ್ರ ಟೋಲ್‌ಪ್ಲಾಜಾ ಇರುತ್ತದೆ ಎಂದು ಹೇಳಿದ್ದರು.


 ಈ ನಡುವೆಯೇ ವಾರ್ಷಿಕ 49.05 ಕೋಟಿ ರು.ಗೆ.ಟೆಂಡರ್ ಆಹ್ವಾನಿಸಲಾಗಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಸೆಂಟ್ರಲ್ ಇ ಪ್ರೊಕ್ಯೂರ್‌ಮೆಂಟ್ ಪೋರ್ಟಲ್ ನಲ್ಲಿ ಮಾ.23ರಂದು ಹಾಕಲಾಗಿದೆ.ಟೆಂಡರ್ ಹಾಕಲು ದಿನಾಂಕವನ್ನು ಅದೇ ದಿನ ನಿಗದಿಪಡಿಸಲಾಗಿದ್ದು, ಎಪ್ರಿಲ್ 13ಕ್ಕೆ ಕೊನೆ ದಿನವಾಗಿದೆ.

- Advertisement -
spot_img

Latest News

error: Content is protected !!