Thursday, June 4, 2026
Homeಇತರಇಂದು ಸಂಜೆ 4 ಗಂಟೆಗೆ ದೇಶವನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ, ಮತ್ತೆ ಲಾಕ್ ಡೌನ್ ಬಗ್ಗೆ...

ಇಂದು ಸಂಜೆ 4 ಗಂಟೆಗೆ ದೇಶವನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ, ಮತ್ತೆ ಲಾಕ್ ಡೌನ್ ಬಗ್ಗೆ ಹೇಳ್ತಾರಾ ಪಿಎಂ

- Advertisement -
- Advertisement -

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಸಂಜೆ 4 ಗಂಟೆಗೆ ರಾಷ್ಟ್ರವನ್ನುದ್ದೇಶೀಸಿ ಮಾತನಾಡಲಿದ್ದಾರೆ. ನಿನ್ನೆ ಕೇಂದ್ರ ಸರಕಾರ ಚೀನಾದ 59 ಆಪ್‌ಗಳನ್ನು ನಿಷೇಧಿಸಿದ ಬೆನ್ನಲ್ಲೇ ಇವತ್ತು ಮೋದಿ ಭಾಷಣ ನಿಗದಿಯಾಗಿರುವುದು ಹಲವು ಕುತೂಹಲಕ್ಕೆ ಕಾರಣವಾಗಿದೆ. ಚೀನಾ ವಿರುದ್ಧ ಕೇಂದ್ರ ತೆಗೆದುಕೊಳ್ಳುತ್ತಿರುವ ಕಠಿಣ ಕ್ರಮಗಳ ಬಗ್ಗೆ ಮೋದಿ ಪ್ರಸ್ತಾಪಿಸುವ ಸಾಧ್ಯತೆ ಇದೆ.

ಈ ಬಗ್ಗೆ ಪ್ರಧಾನಿ ಕಾರ್ಯಾಲಯ ಟ್ವೀಟ್‌ ಮಾಡಿ ಜೂನ್‌ 30 ಸಂಜೆ 4ಕ್ಕೆ ಭಾಷಣ ನಿಗದಿಯಾಗಿರುವುದನ್ನು ಖಚಿತಪಡಿಸಿದೆ. ಪ್ರಧಾನಿ ಇಂದು ಯಾವ ವಿಷಯದ ಬಗ್ಗೆ ಮಾತನಾಡಲಿದ್ದಾರೆ ಎಂಬುದು ಇನ್ನು ಬಹಿರಂಗವಾಗಿಲ್ಲ. ಆದರೆ, ಚೀನಾದ ಆಪ್‌ಗಳ ನಿಷೇಧದ ಬಗ್ಗೆ ಹಾಗೂ ಬಾಯ್ಕಾಟ್‌ ಚೀನಾ ಬಗ್ಗೆ ಭಾಷಣದಲ್ಲಿ ಪ್ರಸ್ತಾಪಿಸುವ ಸಾಧ್ಯತೆ ಇದೆ. ಜೊತೆಗೆ ಕೊರೊನಾ ವೈರಸ್‌ ನಿಯಂತ್ರಣಕ್ಕೆ ಲಾಕ್‌ಡೌನ್‌ ಘೋಷಿಸಿ 100 ದಿನ ಸಮೀಪಿಸುತ್ತಿರುವ ಹಿನ್ನೆಲೆ ಮೋದಿ ಮಾತು ಮಹತ್ವ ಪಡೆದಿದೆ.

ಇನ್ನು, ದೇಶದಲ್ಲಿ ಕೊರೊನಾ ವೈರಸ್‌ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆ ಮತ್ತೆ ಲಾಕ್‌ಡೌನ್‌ ಚರ್ಚೆಯು ಕೂಡ ದೇಶದಲ್ಲಿ ನಡೆಯುತ್ತಿದೆ. ಈ ಹಿನ್ನೆಲೆ ಕೂಡ ಪ್ರಧಾನಿ ಭಾಷಣ ದೇಶದ ಗಮನಸೆಳೆದಿದ್ದು, ದೇಶವಾಸಿಗಳಲ್ಲಿ ಹಲವು ಕುತೂಹಲಗಳು ಗರಿಗೆದರಿವೆ.

- Advertisement -

Latest News

error: Content is protected !!