Sunday, June 7, 2026
Homeಕರಾವಳಿಮಂಗಳೂರುಪುತ್ತೂರಿನಲ್ಲಿ ಹಣ್ಣುಹಂಪಲು ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಕೊರೊನಾ, ಆತಂಕದಲ್ಲಿ ಜನರು

ಪುತ್ತೂರಿನಲ್ಲಿ ಹಣ್ಣುಹಂಪಲು ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಕೊರೊನಾ, ಆತಂಕದಲ್ಲಿ ಜನರು

- Advertisement -
- Advertisement -

ಪುತ್ತೂರು : ಪುತ್ತೂರಿನಲ್ಲಿ ದಿನಕ್ಕೆ ಒಂದು ಎರಡು ಅಂತಾ ಪ್ರತಿ ದಿನ ಕೊರೊನಾ ಪ್ರಕರಣಗಳು ವರದಿಯಾಗುತ್ತಲೇ ಇವೆ. ಇಂದು ಪುತ್ತೂರು ನಗರದಲ್ಲಿ ಮತ್ತೊಂದು ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಜನರನ್ನು ಆತಂಕಕ್ಕೆ ತಳ್ಳಿದೆ.

ಪುತ್ತೂರಿನ ಹಣ್ಣು ಹಂಪಲುಗಳ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಕೃಷ್ಣನಗರದ ಮಹಿಳೆಯ ಆರೋಗ್ಯದಲ್ಲಿ ಏರುಪೇರು ಉಂಟಾದ ಕಾರಣ ಆಕೆಯ ಗಂಟಲು ದ್ರವವನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಆಗ ಆಕೆಗೆ ಕೊರೊನಾ ಇರೋದು ದೃಢಪಟ್ಟಿದೆ. ಇದೀಗ ಆಕೆಯನ್ನು ಮಂಗಳೂರಿನ ಕೊವಿಡ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್ ಮಾಡಲಾಗಿದೆ.

- Advertisement -

Latest News

error: Content is protected !!