Thursday, May 9, 2024
Homeಕರಾವಳಿಉಡುಪಿಕರಾವಳಿಯಲ್ಲಿ ಮುಂದುವರೆದ ಕೊರೊನ ಕಸರತ್ತು : ಉಡುಪಿ,ದ.ಕ ಜಿಲ್ಲೆಯಲ್ಲಿ ಇಂದು ದೃಢಗೊಂಡ ಪ್ರಕರಣಗಳೆಷ್ಟು ?

ಕರಾವಳಿಯಲ್ಲಿ ಮುಂದುವರೆದ ಕೊರೊನ ಕಸರತ್ತು : ಉಡುಪಿ,ದ.ಕ ಜಿಲ್ಲೆಯಲ್ಲಿ ಇಂದು ದೃಢಗೊಂಡ ಪ್ರಕರಣಗಳೆಷ್ಟು ?

spot_img
- Advertisement -
- Advertisement -

ಮಂಗಳೂರು : ಕರಾವಳಿಯಲ್ಲಿ ಕೊರೊನ ತನ್ನ ರುದ್ರನರ್ತನ ಮುಂದುವರೆಸಿದ್ದು ,ಇಂದು ದ.ಕ ಜಿಲ್ಲೆಯಲ್ಲಿ 139 ಮತ್ತು ಉಡುಪಿ ಜಿಲ್ಲೆಯಲ್ಲಿ 136 ಸೋಂಕಿತರು ಪತ್ತೆಯಾಗಿದ್ದಾರೆ.ಇಂದು ಪತ್ತೆಯಾದ 139 ಪ್ರಕರಣಗಳೊಂದಿಗೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 5847ಕ್ಕೆ ಏರಿಕೆಯಾಗಿದೆ. ಇನ್ನು 3017 ಸಕ್ರೀಯ ಪ್ರಕರಣಗಳಿದ್ದು, 2680 ಮಂದಿ ಇದುವರೆಗೂ ಗುಣಮುಖರಾಗಿದ್ದಾರೆ. ಹಾಗೇ ಇಂದು 8 ಮಂದಿ ಕೊರೊನಾಗೆ ಬಲಿಯಾಗಿದ್ದು, ಇದುವರೆಗೂ ಒಟ್ಟು 148 ಮಂದಿ ಜಿಲ್ಲೆಯಲ್ಲಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ.

ಉಡುಪಿ ಜಿಲ್ಲೆಯಲ್ಲಿಂದು 852 ಸ್ವಾಬ್ ಟೆಸ್ಟ್ ಫಲಿತಾಂಶ ಬಂದಿದ್ದು, ಅದರಲ್ಲಿ 716 ಜನರ ಟೆಸ್ಟ್ ಫಲಿತಾಂಶ ನೆಗೆಟಿವ್ ಬಂದಿದೆ. ಉಳಿದ 136 ಪಾಸಿಟಿವ್ ಆಗಿದೆ. ಉಡುಪಿಯಲ್ಲಿ ಒಟ್ಟು 4491 ಪ್ರಕರಣಗಳು ಪತ್ತೆಯಾಗಿದ್ದು, ಸದ್ಯ 3017 ಸಕ್ರೀಯ ಪ್ರಕರಣಗಳಿವೆ. 2680 ಮಂದಿ ಗುಣಮುಖರಾಗಿದ್ದಾರೆ. ಇಂದು 6 ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದು, ಒಟ್ಟು 35 ಮಂದಿ ಇದುವರೆಗೂ ಕೋವಿಡ್ ಗೆ ಬಲಿಯಾಗಿದ್ದಾರೆ.

- Advertisement -
spot_img

Latest News

error: Content is protected !!