Sunday, June 7, 2026
Homeಕರಾವಳಿಮಂಗಳೂರು ಬಂಟ್ವಾಳ; ಚಾಲಕನ ನಿಯಂತ್ರಣ ತಪ್ಪಿ ನೀರಿಗೆ ಬಿದ್ದ ಟಿಪ್ಪರ್

 ಬಂಟ್ವಾಳ; ಚಾಲಕನ ನಿಯಂತ್ರಣ ತಪ್ಪಿ ನೀರಿಗೆ ಬಿದ್ದ ಟಿಪ್ಪರ್

- Advertisement -
- Advertisement -

ಬಂಟ್ವಾಳ: ತಾತ್ಕಾಲಿಕ ರಸ್ತೆಯಲ್ಲಿ ಸಾಗುತ್ತಿದ್ದಾಗ ಟಿಪ್ಪರ್ ಒಂದು ಚಾಲಕನ ನಿಯಂತ್ರಣ ತಪ್ಪಿ ನೀರಿಗೆ ಬಿದ್ದ ಘಟನೆ ಪೊಳಲಿ-ಅಡ್ಡೂರು ಫಲ್ಗುಣಿ ಸೇತುವೆಯ ಬಳಿ ನಡೆದಿದೆ.

ಪೊಳಲಿ-ಅಡ್ಡೂರು ಸೇತುವೆಯ ದುರಸ್ಥಿ ಕಾಮಗಾರಿಯು ಭರದಿಂದ ಸಾಗುತ್ತಿದ್ದು,ಈ ಹಿನ್ನಲೆಯಲ್ಲಿ ಇದಕ್ಕೆ ಬೇಕಾದ ಸಾಮಾಗ್ರಿಗಳನ್ನು ತರಲು ನದಿಗೆ ಮಣ್ಣು ಹಾಕಿ ತಾತ್ಕಾಲಿಕ ರಸ್ತೆ ನಿರ್ಮಿಸಲಾಗಿತ್ತು. ಇದಕ್ಕೆ ದೊಡ್ಡಕಲ್ಲು ಜಲ್ಲಿ ಕಲ್ಲು ತಂದು ಹಾಕಿ ಟಿಪ್ಪರನ್ನು ಹಿಂದಕ್ಕೆ ತಿರುಗಿಸುವ ವೇಳೆ ನಿಯಂತ್ರಣ ತಪ್ಪಿ ಸುಮಾರು‌10 ಅಡಿಯಷ್ಟು ನದಿ ನೀರಿಗೆ ಮಗುಚಿ ಬಿದ್ದಿದೆ.

ಪರಿಣಾಮ ಟಿಪ್ಪರ್ ನ ನಾಲ್ಕು ಚಕ್ರಗಳು‌ ಮೇಲ್ಮುಖವಾಗಿ ಬಿದ್ದಿದ್ದು,ಚಾಲಕ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ. ನದಿಯಲ್ಲಿ ನೀರು ಕೂಡ ತುಂಬಿತ್ತು‌ ಎನ್ನಲಾಗಿದೆ.

- Advertisement -

Latest News

error: Content is protected !!