Thursday, June 4, 2026
Homeಕರಾವಳಿಕಡಬದ ಆಲಂಕಾರಿನಲ್ಲಿ ವಿದ್ಯುತ್ ತಂತಿ ತಾಗಿ ಮೂರು ನವಿಲುಗಳು ಸಾವು

ಕಡಬದ ಆಲಂಕಾರಿನಲ್ಲಿ ವಿದ್ಯುತ್ ತಂತಿ ತಾಗಿ ಮೂರು ನವಿಲುಗಳು ಸಾವು

- Advertisement -
- Advertisement -

ಕಡಬ: ವಿದ್ಯುತ್ ತಂತಿ ತಾಗಿ ಮೂರು ನವಿಲುಗಳು ಸಾವನ್ನಪ್ಪಿರುವ ಘಟನೆ  ಆಲಂಕಾರು‌ ಗ್ರಾಮದ ನಗ್ರಿ ಎಂಬಲ್ಲಿ ನಡೆದಿದೆ.  ಒಂದು ಗಂಡು ಹಾಗೂ ಎರಡು ಹೆಣ್ಣು ನವಿಲುಗಳು ಸಾವನ್ನಪ್ಪಿವೆ.

ಹಾರಾಡುವ ವೇಳೆ ವಿದ್ಯುತ್ ತಂತಿ ತಾಗಿ ಸಾವನ್ನಪ್ಪಿರಬಹುದೆಂದು ಶಂಕಿಸಲಾಗಿದೆ .ಈ ಬಗ್ಗೆ ಸ್ಥಳಿಯರು ಅರಣ್ಯ ಇಲಾಖೆಯ   ಗಮನಕ್ಕೆ ತಂದಿದ್ದಾರೆ.  ನವಿಲುಗಳು  ‌ನಗ್ರಿ ಅಸುಪಾಸಿನಲ್ಲಿ ಸುತ್ತಾಡಿಕೊಂಡು  ಕೆಲವು ಮನೆಗಳಲ್ಲಿ ಹಾಕುವ ಆಹಾರವನ್ನು ತಿನ್ನುತ್ತಾ  ಅಲ್ಲಿಯೇ ಸುತ್ತಾಡಿಕೊಂಡು ಜನರಿಗೆ ಕಣ್ಣಿಗೆ ಮುದ ನೀಡುತ್ತಿದ್ದವು ಎನ್ನಲಾಗಿದೆ.

- Advertisement -

Latest News

error: Content is protected !!