Saturday, May 4, 2024
Homeಚಿಕ್ಕಮಗಳೂರುಸಾಯುವ ಮುನ್ನ ಕಾಫಿನಾಡಿಗೆ ಬಂದಿದ್ದ ಸಂತೋಷ್ ಪಾಟೀಲ್ :  ಚಿಕ್ಕಮಗಳೂರಿನಲ್ಲಿ ಮೂರು ದಿನಗಳ ವಾಸ್ತವ್ಯ

ಸಾಯುವ ಮುನ್ನ ಕಾಫಿನಾಡಿಗೆ ಬಂದಿದ್ದ ಸಂತೋಷ್ ಪಾಟೀಲ್ :  ಚಿಕ್ಕಮಗಳೂರಿನಲ್ಲಿ ಮೂರು ದಿನಗಳ ವಾಸ್ತವ್ಯ

spot_img
- Advertisement -
- Advertisement -

ಚಿಕ್ಕಮಗಳೂರು: ಸಂತೋಷ್ ಪಾಟೀಲ್ ಬೆಳಗಾವಿ ಮೂಲದ ಗುತ್ತಿಗೆದಾರ. ಉಡುಪಿಯಲ್ಲಿ ಆತ್ಮಹತ್ಯೆಗೆ ಶರಣಾಗುವ ಮುನ್ನ ಕಾಫಿನಾಡಿನಲ್ಲಿ ಈತ 3 ದಿನಗಳ ಕಾಲ ವಾಸ್ತವ್ಯವನ್ನು ಹೂಡಿದ್ದರು. ಸ್ನೇಹಿತರೊಂದಿಗೆ ಮೂರು ದಿನಗಳ ಕಾಲ ಪ್ರಕೃತಿ ಮಡಿಲಿನಲ್ಲಿ ಸಂತೋಷ್ ಪಾಟೀಲ್ ಸಂತೋಷದಿಂದ ಕಾಲ ಕಳೆದಿದ್ದರು.

ರಾಜ್ಯರಾಜಕಾರಣದಲ್ಲಿ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಸಾಕಷ್ಟು ಸಂಚಲನವನ್ನೇ ಉಂಟು ಮಾಡಿದೆ.ಗುತ್ತಿಗೆ ಕೆಲಸಕ್ಕೆ  ಕಮಿಷನ್  ನೀಡುವ ಆರೋಪವನ್ನು ಸಚಿವ ಈಶ್ವರಪ್ಪ ವಿರುದ್ಧ ಮಾಡಿದ್ದರು. ಸಾಕಷ್ಟು ರಾಜ್ಯರಾಜಕಾರಣದಲ್ಲಿ ವಿವಾದದ ಬಿರುಗಾಳಿಯನ್ನೇ ಎಬ್ಬಿಸಿತು. ಸಂತೋಷ್ ಆತ್ಮಹತ್ಯೆ ಬಳಿಕ ಸಚಿವ ಈಶ್ವರಪ್ಪ ತಮ್ಮ‌ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಉಡುಪಿ ಪೊಲೀಸರು ಇದೀಗ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಆರಂಭಿಸಿದ್ದಾರೆ. ಸಂತೋಷ್ ಟ್ರ್ಯಾಕ್ ರೆಕಾರ್ಡನ್ನು ಈಗ ಪೊಲೀಸರು ಕಲೆ ಹಾಕುತ್ತಿದ್ದು ಆತ ಸಾಯುವ ಮುನ್ನ ಆತ ಎಲ್ಲೆಲ್ಲಿ ಓಡಾಡಿದ್ದ ಆತನ ಚಲನವಲನಗಳ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಈ  ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನ ಹೋಂಸ್ಟೇ ಒಂದರಲ್ಲಿ ಮೂರು ದಿನಗಳ ಕಾಲ ಸಾಯುವ ಮುನ್ನ ಸಂತೋಷ್ ಪಾಟೀಲ್ ತಂಗಿರುವ ಮಾಹಿತಿಯನ್ನು ಉಡುಪಿ ಪೊಲೀಸರು ಇದೀಗ ಕಲೆಹಾಕಿ  ಸಿಸಿಟಿವಿ ದೃಶ್ಯಗಳನ್ನು ವಶಕ್ಕೆ ಪಡೆದಿದ್ದಾರೆ.

ಸಂತೋಷ್ ಪಾಟೀಲ್ ಆತ್ಮಹತ್ಯೆಗೆ  ಮುನ್ನ ಚಿಕ್ಕಮಗಳೂರಿನಲ್ಲಿ ವಾಸ್ತವ್ಯಹೊಡಿದ್ದರು.ಚಿಕ್ಕಮಗಳೂರಿನ ಕೈಮರ ಸಮೀಪದ ಬಾನ್ ಆಫ್ ಬೆರ್ರಿ ಹೋಂ ಸ್ಟೇನಲ್ಲಿ  ವಾಸ್ತವ್ಯ ಹೂಡಿರೋ ಬಗ್ಗೆ ಪೊಲೀಸ್ರು ತನಿಖೆ ನಡೆಸಿದ್ದಾರೆ. ಖಾಸಗಿ ಹೋಂಸ್ಟೇ ನಲ್ಲಿ ಸಂತೋಷ್ ಪಾಟೀಲ್ ಇಬ್ಬರು ಸ್ನೇಹಿತರೋಂದಿಗೆ ಬಂದಿದ್ದರು. ಈ ಬಗ್ಗೆ ಉಡುಪಿ ಪೊಲೀಸ್ರು  ಹೋಂಸ್ಟೇಗೆ ಆಗಮಿಸಿ  ಡಿವಿಅರ್ ಸೇರಿ ಕೆಲವೊಂದು ದಾಖಲೆ ವಶಕ್ಕೆ ಪಡೆದಿದ್ದಾರೆ.ಎಪ್ರಿಲ್‌ 8,9,10,11 ರ ಬೆಳಗ್ಗೆನವರೆಗಿನ ಚಲನವಲನಗಳ ಸಂಪೂರ್ಣ ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದಾರೆ.

ಚಿಕ್ಕಮಗಳೂರಿನಿಂದ ನಂತರ ಉಡುಪಿಗೆ ತೆರಳಿರುವ ಸಂತೋಷ್ ಪಾಟೀಲ್ ಅಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಹೋಂಸ್ಟೇನಲ್ಲಿ ಇದ್ದಂತ ವೇಳೆಯಲ್ಲಿ  ಲವಲವಿಕೆಯಿಂದ ಇದ್ದ ಸಂತೋಷ್ ಪಾಟೀಲ್ ಕಾಲ ಕಳೆದಿದ್ದರು.ಏಪ್ರೀಲ್ 8ರಂದು‌ ಬೆಳಗಾವಿಯಿಂದ ಚಿಕ್ಕಮಗಳೂರಿಗೆ ಗೆ ಆಗಮಿಸಿದ ಸಂತೋಷ್ ಪಾಟೀಲ್ ಆ ರಾತ್ರಿ ಚಿಕ್ಕಮಗಳೂರಿನ ಕೈಮಾರ ಚೆಕ್ ಮಾಸ್ಟ್ ಬಳಿಯ ಹೋಂ ಸ್ಟೇ ವ್ಯಾಸ್ತವ್ಯ ಹೊಡಿದ್ದಾರೆ.ನವೀನ್ ಎನ್ನುವರ ಹೆಸರಿನಲ್ಲಿ ಹೋಂಸ್ಟೇ ಬುಕಿಂಗ್ ಆಗಿತ್ತು. ಒಟ್ಟು ಮೂರು ಜನ ಹೋಂ ಸ್ಟೇಯಲ್ಲಿ ಇದ್ದರು. ಏಪ್ರೀಲ್ 9 ರ ಬೆಳಿಗ್ಗೆ ಗಿರಿ ರೌಂಡ್ಸ್ ಮಾಡಿ ತದನಂತರ ಕೊಠಡಿಗೆ ಬಂದು ವಿಶ್ರಾಂತಿ ಪಡೆದು ಸಂಜೆ ಸ್ನೇಹಿತರೊಂದಿಗೆ ಡ್ಯಾನ್ಸ್ ಮಾಡಿ ಊಟ ಮಾಡಿ ಮಲಗಿದ್ದರು. ಮರುದಿನ ಬೆಳಗ್ಗೆ 10ರಂದು ಹೋಂಸ್ಟೇ ಖಾಲಿಮಾಡಿ ಉಡುಪಿಗೆ ಪ್ರಯಾಣ ಬಳಸಬೇಕಾಗಿತ್ತು. ಆದ್ರೆ ಇಲ್ಲಿನ ಪರಿಸರದಲ್ಲಿ ಉಳಿಯುವ ಇಂಗಿತ ವ್ಯಕ್ತಪಡಿಸಿದ ಸಂತೋಷ್ ಪಾಟೀಲ್ ಚಿಕ್ಕಮಗಳೂರಿನ ನಗದರ ತನಕ  ಬಂದು ಮತ್ತೆ ಹೋಂಸ್ಟೇಗೆ ಆಗಮಿಸಿ ಎಪ್ರಿಲ್ 10 ರಾತ್ರಿ ಹೋಂಸ್ಟೇಯಲ್ಲಿ ಉಳಿದಿದ್ದಾರೆ. ಮರುದಿನ ಏಪ್ರಿಲ್ 11 ರ  ಬೆಳಿಗ್ಗೆ ಹೋಂಸ್ಟೇ ಯಿಂದ  ಉಡುಪಿಗೆ ಪ್ರಯಾಣ ಬೆಳೆಸಿದ್ದಾರೆ. ಹೋಂಸ್ಟೇನಲ್ಲಿ‌ ಇದ್ದಂತ ವೇಳೆಯಲ್ಲಿ ಖುಷಿಯಿಂದ ಇದ್ದ ಬಗ್ಗೆ ಹೋಂಸ್ಟೇ ಕಾರ್ಮಿಕರು ತಿಳಿಸಿದ್ದಾರೆ. ಡ್ಯಾನ್ಸ್ ಮಾಡಿ, ಹೊರಡುವ ವೇಳೆಯಲ್ಲಿ  ನಾಯಿಗೆ ಬಿಸ್ಕೆಟ್ ಹಾಕಿ ಪ್ರಕೃತಿಯೊಂದಿಗೆ ಸಾಕಷ್ಟು ಸಮಯವನ್ನು ಕಳೆದಿರುವ ಬಗ್ಗೆ ಮಾಹಿತಿಯನ್ನು ಕಾರ್ಮಿಕರು ಶೇರ್ ಮಾಡಿದ್ದಾರೆ.

- Advertisement -
spot_img

Latest News

error: Content is protected !!