Thursday, June 4, 2026
Homeಕರಾವಳಿಉಡುಪಿಉಡುಪಿಯಲ್ಲಿ ಝೋಮ್ಯಾಟೋ ಪುಡ್ ಡೆಲಿವರಿ ಬ್ಯಾಗ್ ನಲ್ಲಿ ಗಾಂಜಾ ಮಾರಾಟಕ್ಕೆ ಯತ್ನ; ಮೂವರ ಬಂಧನ

ಉಡುಪಿಯಲ್ಲಿ ಝೋಮ್ಯಾಟೋ ಪುಡ್ ಡೆಲಿವರಿ ಬ್ಯಾಗ್ ನಲ್ಲಿ ಗಾಂಜಾ ಮಾರಾಟಕ್ಕೆ ಯತ್ನ; ಮೂವರ ಬಂಧನ

- Advertisement -
- Advertisement -

ಉಡುಪಿ: ಝೋಮ್ಯಾಟೋ ಫುಡ್ ಡೆಲಿವರಿ ಬಾಗ್ ನಲ್ಲಿ ಗಾಂಜಾ ಮಾರಾಟಕ್ಕೆ ಪ್ರಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಉಡುಪಿ ಸೆನ್ ಅಪರಾಧ ಠಾಣೆ ಪೊಲೀಸರು ರವಿ ಶಂಕರ್, ಅಂಜಲ್ ಬೈಜು ಹಾಗೂ ದೇವಿಪ್ರಸಾದ್ ಎಂಬ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳ ಪೈಕಿ ರವಿಶಂಕರ್ ಪಾಲಕ್ಕಾಡ್ ನಿಂದ ರೈಲಿನಲ್ಲಿ ಉಡುಪಿಗೆ ಗಾಂಜಾ ತಂದು ಸರಬರಾಜು ಮಾಡುತ್ತಿದ್ದ ಎಂಬ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಪತ್ರಾಂಕಿತ ಅಧಿಕಾರಿ ಪ್ರೊ. ಪ್ರಕಾಶ್ ರಾವ್ ಹಾಗೂ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳಿಂದ ಸುಮಾರು 1 ಕೆಜಿ 277 ಗ್ರಾಂ ತೂಕದ ಗಾಂಜಾ, 2 ಬೈಕ್ , ಝೊಮ್ಯಾಟೋ ಫುಡ್ ಡೆಲಿವರಿ ಬಾಗ್, 4 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

- Advertisement -

Latest News

error: Content is protected !!