Wednesday, June 3, 2026
Homeಕರಾವಳಿಮಂಗಳೂರುಮಂಗಳೂರು;  ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆ ಹೆಸರಲ್ಲಿ ಕರಾವಳಿಯ ಹಿಂದೂ ಮುಖಂಡರಿಗೆ ವಾಟ್ಸಾಪ್ ಮೂಲಕ ಬೆದರಿಕೆ

ಮಂಗಳೂರು;  ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆ ಹೆಸರಲ್ಲಿ ಕರಾವಳಿಯ ಹಿಂದೂ ಮುಖಂಡರಿಗೆ ವಾಟ್ಸಾಪ್ ಮೂಲಕ ಬೆದರಿಕೆ

- Advertisement -
- Advertisement -

ಮಂಗಳೂರು;  ಜೈಶ್-ಎ-ಮೊಹಮ್ಮದ್ ಸಂಘಟನೆ ಹೆಸರಲ್ಲಿ ಕರಾವಳಿಯ ಹಿಂದೂ ಜಾಗರಣ ವೇದಿಕೆ ಮುಖಂಡರಿಗೆ ವಾಟ್ಸಾಪ್ ಮೂಲಕ ಬೆದರಿಕೆ ಮೆಸೇಜ್ ಬಂದಿದೆ.

ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಯೋಜಕ ನರಸಿಂಹ ಮಾಣಿ ಅವರಿಗೆ ಈ ಬೆದರಿಕೆ ಬಂದಿದ್ದು, ಬೆದರಿಕೆ ಆಡಿಯೋದಲ್ಲಿ ಹಲವು ಹಿಂದೂ ಮುಖಂಡರ ಲಿಸ್ಟ್ ರೆಡಿ ಮಾಡಿದ್ದೇವೆ, ನಿನ್ನ ಹೆಸರು ಲಿಸ್ಟ್ ನಲ್ಲಿ ಮೊದಲಿಗಿದೆ, ನಿನ್ನ ಎಲ್ಲಾ ಚಲನವಲನಗಳನ್ನು ಗಮನಿಸುತ್ತಿದ್ದೇವೆ.

ಕೊಲೆಯಾದ ಸುಹಾಸ್ ಶೆಟ್ಟಿ ಕೂಡಾ ನಮ್ಮ ಲಿಸ್ಟ್ ನಲ್ಲಿದ್ದ, ಆದರೆ ಯಾರೋ ಒಳ್ಳೆಯ ಜನ ಅವನನ್ನು‌ ಕೊಂದು‌ಹಾಕಿದ್ದಾರೆ. ನಿನ್ನ ಸ್ನೇಹಿತ ರಂಜಿತ್ ಎಂಬವನನ್ನು ಕೊಲ್ಲುತ್ತೇವೆ. ತಲೆ ಕಡಿದು ಸುಲಭವಾಗಿ ಕೊಲ್ಲುವುದಿಲ್ಲ, ಮೊದಲು ಆತನ ಕೈಕಾಲ ಕಡಿಯುತ್ತೇವೆ. ನಂತರ ತಲೆ ಕಡಿದು‌ ದೆಹಲಿಯ ಮೈನ್ ಗೇಟ್ ನಲ್ಲಿ ನೇತಾಡಿಸುತ್ತೇವೆ.ನಾವು ದೆಹಲಿಗೆ ಬಂದು ತಲುಪಿಯಾಗಿದೆ. ನಿಮ್ಮ ಉಲ್ಟಾ ಲೆಕ್ಕಾಚಾರ ಸ್ಟಾರ್ಟ್ ಆಗಿದೆ, ನಿನ್ನನ್ನು ಹೇಗೆ ಕೊಲ್ಲುತ್ತೇವೆ ಎಂದು ಅಲ್ಲಾನಿಗೆ ಗೊತ್ತಿಲ್ಲ, ನಿನ್ನ ಕೊಂದ ರೀತಿಯನ್ನು ನೋಡಿ ಜನ ಕೊಲ್ಲುವ ವಿಧಾನವನ್ನೇ ಮರೆಯಲಿದ್ದಾರೆ. ಮುಸ್ಲಿಮರಿಗೆ ತೊಂದರೆ ಕೊಡೋದನ್ನು ಬಿಟ್ಟು ನಿನ್ನ ಬಗ್ಗೆ ಯೋಚಿಸು, ನಿಮ್ಮ ಪಾರ್ಟಿ ಅಥವಾ ಯಾವುದೇ ಮುಖಂಡರು ನಿಮ್ಮನ್ನು ರಕ್ಷಿಸಲು ಸಾಧ್ಯವಿಲ್ಲ. ನಿಮ್ಮ ಜೊತೆಗೆ ನಿಮ್ಮ ಮುಖಂಡರನ್ನು ಮುಗಿಸಲಾಗುವುದು ಎಂದು ಬೆದರಿಕೆ ಹಾಕಲಾಗಿದೆ. ಈ ಕುರಿತಂತೆ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಇನ್ನು ಹಿಂದೂ ಜಾಗರಣ ವೇದಿಕೆ ಮುಖಂಡರಿಗೆ ಜೀವ ಬೆದರಿಕೆ ಅಡಿಯೋ ಮೆಸೇಜ್ ಬಂದಿರುವ ಹಿನ್ನಲೆ ಉನ್ನತ ತನಿಖೆಗೆ ಹಿಂದೂ ಜಾಗರಣ ವೇದಿಕೆ ಆಗ್ರಹಿಸಿದೆ.

ಹಿಂದೂ ಜಾಗರಣ ವೇದಿಕೆ ಮುಖಂಡ ರಕ್ಷಿತ್ ಬುಡೋಳಿ ವಾಟ್ಸ್ ಅಪ್ ನಂಬರ್ ಗೆ ಬಂದ ಬೆದರಿಕೆ ಆಡಿಯೋ,ಮೆಸೇಜ್ ಬಂದಿದ್ದು, ಸುಹಾಸ್ ಶೆಟ್ಟಿ ಹತ್ಯೆಯನ್ನು NIA ಗೆ ವಹಿಸಲು ಆಗ್ರಹಿಸಲಾಗಿತ್ತು. ಆದರೆ ಪೋಲೀಸ್ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಈ ಪ್ರಕರಣವನ್ನಾದರೂ ಪೋಲೀಸರು ಗಂಭೀರವಾಗಿ ತೆಗೆದುಕೊಳ್ಳಬೇಕು ಮತ್ತು ನರಸಿಂಹ ಮಾಣಿ ಮತ್ತು ರಕ್ಷಿತ್ ಗೆ ಪೋಲೀಸ್ ಭದ್ರತೆ ಒದಗಿಸಬೇಕು ಎಂದು ಹಿಂದೂ ಜಾಗರಣ ವೇದಿಕೆ ಒತ್ತಾಯಿಸಿದೆ.

- Advertisement -

Latest News

error: Content is protected !!