Tuesday, May 14, 2024
Homeತಾಜಾ ಸುದ್ದಿನಟ ಸುದೀಪ್‌ಗೆಖಾಸಗಿ ವಿಡಿಯೋಗಳನ್ನು ಲೀಕ್‌ ಬೆದರಿಕೆ ಪತ್ರ

ನಟ ಸುದೀಪ್‌ಗೆಖಾಸಗಿ ವಿಡಿಯೋಗಳನ್ನು ಲೀಕ್‌ ಬೆದರಿಕೆ ಪತ್ರ

spot_img
- Advertisement -
- Advertisement -

ಬೆಂಗಳೂರು: ನಟ ಸುದೀಪ್‌ ಇಂದು ಬಿಜೆಪಿಗೆ ಸೇರಲಿದ್ದಾರೆ ಎನ್ನುವ ಸುದ್ದಿಯ ಬೆನ್ನಲ್ಲೇ ಸುದೀಪ್‌ ಅವರ ಖಾಸಗಿ ವಿಡಿಯೋಗಳನ್ನು ಲೀಕ್‌ ಮಾಡುವುದಾಗಿ ಹೇಳಿರುವ ಬೆದರಿಕೆ ಪತ್ರವೊಂದು ಬಂದಿದೆ ಎನ್ನಲಾಗಿದೆ.

ಈ ಬಗ್ಗೆ ಪುಟ್ಟೇನಹಳ್ಳಿ ಪೊಲೀಸ್ ಠಾಣೆಗೆ ಸುದೀಪ್ ಅವರ ಮ್ಯಾನೇಜರ್ ಜಾಕ್ ಮಂಜು ಅವರು ದೂರು ನೀಡಿದ್ದಾರೆ. ದೂರಿನಲ್ಲಿ ಅವರು ಸುದೀಪ್ ಖಾಸಗಿ ವಿಡಿಯೋ ಲೀಕ್ ಮಾಡುವುದಾಗಿ ಸೇರಿದಂತೆ ಪತ್ರದಲ್ಲಿ ಅವಾಚ್ಯ ಶಬ್ದಗಳನ್ನು ಉಲ್ಲೇಖ ಮಾಡಲಾಗಿದೆ ಎನ್ನಲಾಗಿದೆ.

ಈ ನಡುವೆ ಘಟನೆ ಸಂಬಂಧ ಜಾಕ್ ಮಂಜು ದೂರಿನನ್ವಯ ಐಪಿಸಿ 504 (ಬೆದರಿಕೆ), 506 (ಪ್ರಾಣ ಬೆದರಿಕೆ) ಹಾಗೂ ಐಟಿ ಆಕ್ಟ್ ಅಡಿಯಲ್ಲಿ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ ಅಂತ ತಿಳಿದು ಬಂದಿದೆ.

- Advertisement -
spot_img

Latest News

error: Content is protected !!