Thursday, June 4, 2026
Homeಕರಾವಳಿನೆಕ್ಕಿಲಾಡಿ: ಗ್ಯಾರೇಜ್ ಗೆ ನುಗ್ಗಿದ ದುಷ್ಕರ್ಮಿಗಳು !

ನೆಕ್ಕಿಲಾಡಿ: ಗ್ಯಾರೇಜ್ ಗೆ ನುಗ್ಗಿದ ದುಷ್ಕರ್ಮಿಗಳು !

- Advertisement -
- Advertisement -

ನೆಕ್ಕಿಲಾಡಿ: ದಕ್ಷಿಣ ಕನ್ನಡ ಜಿಲ್ಲೆಯ 34 ನೆಕ್ಕಿಲಾಡಿ ಗ್ರಾಮದ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಪಕ್ಕ ಇರುವ ಗ್ಯಾರೇಜ್ ಗೆ ನುಗ್ಗಿದ ದುಷ್ಕರ್ಮಿಗಳು ಸುಮಾರು 60 ಸಾವಿರ ರೂಪಾಯಿ ಮೌಲ್ಯದ ಸಾಮಾಗ್ರಿಗಳನ್ನು ಕಳವು ಮಾಡಿದ ಘಟನೆ ನಡೆದಿದೆ.

ಕಾರ್ ಕ್ಲಬ್ ಗ್ಯಾರೇಜ್‍ನಲ್ಲಿ ಜಾಲಾಡಿ ಸಾಮಾಗ್ರಿಗಳನ್ನು ಕಳವುಗೈದಿರುವುದು ಅಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈತ ತಾನು ಬಂದ ಕಾರಿನಲ್ಲಿ ಇವುಗಳನ್ನು ತುಂಬಿಸಿ ಪರಾರಿಯಾಗಿದ್ದಾನೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

- Advertisement -

Latest News

error: Content is protected !!