Friday, April 19, 2024
Homeತಾಜಾ ಸುದ್ದಿಇನ್ಮುಂದೆ ಬಿಎಂಟಿಸಿ ಬಸ್‌ನಲ್ಲಿ ಕಂಡೆಕ್ಟರ್ ಇರಲ್ವಂತೆ; ಡಿಜಿಟಲ್ ತಂತ್ರಜ್ಞಾನದ ಯೋಜನೆ

ಇನ್ಮುಂದೆ ಬಿಎಂಟಿಸಿ ಬಸ್‌ನಲ್ಲಿ ಕಂಡೆಕ್ಟರ್ ಇರಲ್ವಂತೆ; ಡಿಜಿಟಲ್ ತಂತ್ರಜ್ಞಾನದ ಯೋಜನೆ

spot_img
- Advertisement -
- Advertisement -

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಇದೀಗ ಹೊಸ ಯೋಜನೆಯೊಂದನ್ನು ಜಾರಿಗೆ ತರುವ ಚಿಂತನೆಯಲ್ಲಿದೆ.

ಇನ್ಮುಂದೆ ಬಿಎಂಟಿಸಿ ಬಸ್‌ಗಳಲ್ಲಿ ಕಂಡಕ್ಟರ್‌ಗಳ ಹೊರತಾಗಿ ಡಿಜಿಟಲ್ ಮೂಲಕವೇ ಎಲ್ಲಾ ಟಿಕೆಟ್ ಕಲೆಕ್ಷನ್ ಮಾಡುವ ವ್ಯವಸ್ಥೆ ತರುವ ಯೋಜನೆ ರೂಪಿಸಲಾಗುತ್ತಿದೆ.


ನಷ್ಟದ ಸುಳಿಯಲ್ಲಿ ಸಿಲುಕಿ ಪರದಾಟ ನಡೆಸುತ್ತಿರುವ ಬಿಎಂಟಿಸಿ, ಈ ಸಮಸ್ಯೆಯಿಂದ ಹೊರಬರಲು ಮೆಗಾ ಪ್ಲಾನ್ ರೂಪಿಸಿದೆ. ಸದ್ಯ ಬಸ್ ರಸ್ತೆಗಿಳಿಸೋದೇ ಕಷ್ಟ ಅನ್ನೋ ಪರಿಸ್ಥಿತಿಗೆ ತಲುಪಿರುವ ನಿಗಮ ಡಿಜಿಟಲ್ ತಂತ್ರಜ್ಞಾನದ ಮೊರೆ ಹೋಗಿದೆ.


ಕ್ಯೂ ಆರ್ ಕೋಡ್, ಕಾಮನ್ ಮೊಬಿಲಿಟಿ ಕಾರ್ಡ್ ಮೂಲಕ ಟಿಕೆಟ್ ಕಲೆಕ್ಷನ್ ಮಾಡುವ ಪ್ಲಾನ್ ರೂಪಿಸಲಾಗುತ್ತಿದೆ. ಕೇವಲ ಡ್ರೈವರ್‌ನಿಂದ ಮಾತ್ರ ಬಸ್ ನಿರ್ವಹಿಸಲು ತೀರ್ಮಾನ ಮಾಡಲಾಗಿದೆ.
ಇನ್ನು ಕಂಡೆಕ್ಟರ್ ಕೆಲಸ ಮಾಡುತ್ತಿರುವವರನ್ನು ಡ್ರೈವರ್ ಕಂಡಕ್ಟರ್ಸ್‌ಗಳಾಗಿ ನೇಮಿಸಲು ಯೋಜನೆ ಮಾಡಲಾಗುತ್ತಿದೆ. ಈಗಾಗಲೇ ನಗರದ ಹಲವೆಡೆ ಚಾಲಕರ ಕೊರತೆಯಿಂದ ಹಲವು ಬಸ್ ಲೈನ್ ರದ್ದು ಮಾಡಲಾಗಿದೆ.


ಇದರ ಜೊತೆಗೆ ಸಿಬ್ಬಂದಿ ಸಂಬಳದ ಹೊರೆಯನ್ನ ಅರ್ಧಕ್ಕೆ ಇಳಿಸುವ ಸಾಧ್ಯತೆ ಇದೆ. ಇನ್ನು ಈ ನಿರ್ಧಾರಕ್ಕೆ ಬಿಎಂಟಿಸಿ ನೌಕರರು ಅಸಮಾಧಾನ ಹೊರಹಾಕುತ್ತಿದ್ದಾರೆ. ಈ ಯೋಜನೆ ಜಾರಿಗೆ ತಂದರೆ ಬಿಎಂಟಿಸಿಯನ್ನೇ ನಂಬಿಕೊಂಡು ಜೀವನ ನಡೆಸುವವರ ಸ್ಥಿತಿ ಬೀದಿಗೆ ಬರುತ್ತದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

- Advertisement -
spot_img

Latest News

error: Content is protected !!