ಬಂಟ್ವಾಳ: ಕಲ್ಲಡ್ಕದ ಪ್ರಸಿದ್ಧ ಕೆ ಟಿ ಹೋಟೆಲ್ ನಲ್ಲಿ ಕಳ್ಳತನ ಮಾಡಲಾಗಿದೆ. ಕಲ್ಲಡ್ಕದ ಶ್ರೀ ಲಕ್ಮೀನಿವಾಸ ಕೆ.ಟಿ.ಹೋಟೆಲ್ ಗೆ ಶುಕ್ರವಾರ ಮುಂಜಾನೆ ಸುಮಾರು 2 ಗಂಟೆ ವೇಳೆ ಹೆಲ್ಮೆಟ್ ಧರಿಸಿ ಬಂಧ ಕಳ್ಳ ಟಾರ್ಚ್ ಬಳಸಿ, ಕ್ಯಾಶ್ ಕೌಂಟರ್ ಸಹಿತ ಇತರ ಕಡೆಗಳಲ್ಲಿ ಜಾಲಾಡಿ ಬಳಿಕ ದೇವರ ಹುಂಡಿಯನ್ನು ಎಗರಿಸಿದ್ದಾನೆಯ ಇನ್ನು ಹೆಲ್ಮೆಟ್ ಧರಿಸಿ ಬಂದ್ರೂ ಕಳ್ಳನ ಮುಖ ಸಿಸಿ ಟಿವಿಯಲ್ಲಿ ದಾಖಲಾಗಿದ್ದು ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಳವಿನ ಬಗ್ಗೆ ಹೋಟೇಲು ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಅಧಿಕೃತ ದೂರು ನೀಡಿಲ್ಲ ಎನ್ನಲಾಗಿದೆ. ದೇವರ ಡಬ್ಬಿಯಲ್ಲಿದ್ದ ಚಿಲ್ಲರೆ ಹಣವನ್ನು ಕಳವು ಮಾಡಿದ ಕಳ್ಳ ಇತರ ಕಡೆಗಳಲ್ಲಿ ಜಾಲಾಡಿರುವ ದೃಶ್ಯ ಸಿಸಿ.ಟಿ.ವಿಯಲ್ಲಿ ಸೆರೆಯಾಗಿದೆ. ಸುಮಾರು 7 ನಿಮಿಷಗಳ ಕಾಲ ಹೋಟೆಲ್ ಒಳಗಡೆ ಆರಾಮವಾಗಿ ಕಳ್ಳ ಜಾಲಾಡಿರುವ ದೃಶ್ಯ ಸೆರೆಯಾಗಿದೆ. ಸಿಸಿ ಕ್ಯಾಮರಾ ಪೂಟೇಜ್ ಗಳನ್ನು ಬಂಟ್ವಾಳ ನಗರ ಠಾಣಾ ಪೋಲೀಸರು ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ.