Friday, May 17, 2024
Homeಕರಾವಳಿಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷರ ಮನೆಯಿಂದ ಲಕ್ಷಾಂತರ ರೂಪಾಯಿಯ ಚಿನ್ನಾಭರಣ ಕಳವು

ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷರ ಮನೆಯಿಂದ ಲಕ್ಷಾಂತರ ರೂಪಾಯಿಯ ಚಿನ್ನಾಭರಣ ಕಳವು

spot_img
- Advertisement -
- Advertisement -

ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷರ ಮನೆಯಿಂದ ಲಕ್ಷಾಂತರ ರೂಪಾಯಿಯ ಚಿನ್ನಾಭರಣ ಕಳವು ಮಾಡಲಾಗಿದೆ. ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಸ್.ಸಂಶುದ್ದೀನ್ ರ ಮನೆಗೆ ಮೊನ್ನೆ ನುಗ್ಗಿದ ಕಳ್ಳರು  ಬರೋಬ್ಬರಿ 20 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದಾರೆ.

 ಸಂಶುದ್ದೀನ್ ಅವರು ಕುಟುಂಬ ಸಮೇತ ಮೊನ್ನೆ  ಮಧ್ಯಾಹ್ನ 12 ಗಂಟೆಗೆ ಮಂಗಳೂರಿಗೆ ಕಾರ್ಯಕ್ರಮಕ್ಕೆಂದು ಹೋಗಿದ್ದರು. ರಾತ್ರಿ 9.45 ರ ಸುಮಾರಿಗೆ ಅರಂಬೂರಿನ ಮನೆಗೆ ವಾಪಸ್ಸಾಗಿದ್ದರು. ಈ ವೇಳೆ ಮನೆಯ ಎದುರಿನ ಬಾಗಿಲು ಒಡೆದಿರುವುದು ಕಂಡಿದೆ. ಒಳಗೆ ಹೋಗಿ ನೋಡಿದಾಗ ಕಪಾಟುಗಳ ಬಾಗಿಲು ಒಡೆದು ಕಳ್ಳತನ ಮಾಡಿರೋದು ಗೊತ್ತಾಗಿದೆ.

ಅವರ ಮನೆಯಿಂದ ಬೆಲೆಬಾಳುವ 14 ಬ್ರಾಂಡೆಡ್ ವಾಚ್, 20 ಚಿನ್ನದ ಉಂಗುರ, 3 ಪೆಂಡೆಂಡ್, ಡೈಮಂಡ್ ಬ್ರಾಟ್ 2, ಡೈಮಂಡ್ ಸರ 1 ಸಹಿತ 55 ಸಾವಿರ ನಗದು ಸೇರಿ ಒಟ್ಟು 20 ಲಕ್ಷ ಮೌಲ್ಯದ ಆಭರಣ ಕಳ್ಳತನ ಮಾಡಲಾಗಿದೆ.

- Advertisement -
spot_img

Latest News

error: Content is protected !!