Wednesday, June 3, 2026
Homeಕರಾವಳಿಧರ್ಮಸ್ಥಳ; ಕಳ್ಳರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು

ಧರ್ಮಸ್ಥಳ; ಕಳ್ಳರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು

- Advertisement -
- Advertisement -

ಧರ್ಮಸ್ಥಳ; ಸ್ಥಳೀಯರು ಕಳ್ಳರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಧರ್ಮಸ್ಥಳ ಠಾಣಾ ವ್ಯಾಪ್ತಿಯ ಬಂದಾರು ಎಂಬಲ್ಲಿ ನಡೆದಿದೆ.

ಪೆರ್ಲ ಬೈಪಾಡಿ ಬಂದಾರಿನಲ್ಲಿರುವ ಸರ್ಕಾರಿ ಪ್ರೌಢಶಾಲೆಗೆ ರಾತ್ರಿ 12 ಗಂಟೆ ಸುಮಾರಿಗೆ 4 ಜನ ಕಳ್ಳರು ನುಗ್ಗಿರುವುದನ್ನು ಗಮನಿಸಿ ಸ್ಥಳೀಯರು ಶಾಲಾ ವಠಾರದಲ್ಲಿ  ಒಟ್ಟು ಸೇರಿ ಕಳ್ಳರನ್ನು ಹಿಡಿದು ಹಿಗ್ಗಾಮುಗ್ಗ ಥಳಿಸಿದ್ದಾರೆ ಎನ್ನಲಾಗಿದೆ. ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.

ಕಳ್ಳರು ಕಡಬ ಪರಿಸರದವರು ಎನ್ನಲಾಗಿದೆ. ಇವರೆಲ್ಲರೂ ಸಂಘಟನೆಯೊಂದರಲ್ಲಿ ಸಕ್ರಿಯರಾಗಿದ್ದವರು ಎಂದು ಹೇಳಲಾಗುತ್ತಿದೆ. ಕಡಬ ಪರಿಸರದಲ್ಲೂ ಹಲವೆಡೆ  ಮನೆ ಕಳ್ಳತನ, ಟಯರ್ ಕಳ್ಳತನ,ಬಿದಿ ಬದಿ ಸೋಲಾರ್ ಬ್ಯಾಟರಿ ಕಳ್ಳತನ ನಡೆದಿದ್ದು   ಈ ತಂಡವೇ ಅವುಗಳನ್ನೆಲ್ಲಾ  ಮಾಡಿರಬಹುದೆಂದು ಎಂಬ ಗುಸುಗುಸು ಕೇಳಿ ಬರುತ್ತಿದೆ.

- Advertisement -

Latest News

error: Content is protected !!