Friday, June 5, 2026
Homeಕರಾವಳಿಉಡುಪಿಉಡುಪಿ : ಮನೆಗೆ ನುಗ್ಗಿ ನಗದು ಹಾಗೂ ಚಿನ್ನಾಭರಣ ಕಳ್ಳತನ

ಉಡುಪಿ : ಮನೆಗೆ ನುಗ್ಗಿ ನಗದು ಹಾಗೂ ಚಿನ್ನಾಭರಣ ಕಳ್ಳತನ

- Advertisement -
- Advertisement -

ಉಡುಪಿ : ಮನೆಗೆ ನುಗ್ಗಿ ನಗದು ಹಾಗೂ ಚಿನ್ನಾಭರಣ ಕಳ್ಳತನ ಮಾಡಿರುವ ಘಟನೆ ಹಿರಿಯಡ್ಕ ಸಮೀಪದ ಬೆಳ್ಳಂಪಳ್ಳಿ ನಿವಾಸಿ ಮಾಲತಿ ಎಂಬವರ ಮನೆಯಲ್ಲಿ ನಡೆದಿದೆ.

ಮಾಲತಿ ಅವರು ನರ್ಸ್‌ ಆಗಿದ  ಕೆಲಸ ಮಾಡುತ್ತಿದ್ದು ಬೆಳಿಗ್ಗೆ 8:30 ಗಂಟೆಗೆ ಹೋಗಿ ಸಂಜೆ 5:20 ಕ್ಕೆ ಮನೆಗೆ ಬರುತ್ತಾರೆ. ಅವರ ಪತಿ ಕೆಲಸಕ್ಕೆ ಹೋಗಿದ್ದರು. ದೊಡ್ಡ ಮಗ ಸಮೀಪದ ಅಜ್ಜಿ ಮನೆಗೆ ಹೋಗಿದ್ದ. ಮಧ್ಯಾಹ್ನ 2:00 ಗಂಟೆಗೆ ಮಾಲತಿ ಅವರ ಗಂಡ ಅವರು ಕೆಲಸ ಮಾಡುತ್ತಿದ್ದ ಆಸ್ಪತ್ರೆಗೆ ಬಂದು ಯಾರೋ ಕಳ್ಳರು ಮನೆಯ ಬೀಗ ಮುರಿದು ಗೋದ್ರೇಜ್‌ ನಲ್ಲಿದ್ದ ಚಿನ್ನ ಮತ್ತು ನಗದನ್ನು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ತಿಳಿಸಿದ್ದು ಕೂಡಲೆ ಮನೆಗೆ ಬಂದು ನೋಡಿದ್ದಾರೆ. ಆಗ ಯಾರೋ ಕಳ್ಳುರು ಮನೆಯ ಮುಂಭಾಗದ ಬಾಗಿಲಿನ ಚಿಲಕವನ್ನು ಮೀಟಿ ಮನೆಯ ಒಳಗೆ ಪ್ರವೇಶಿಸಿ ಮನೆಯ ಒಳಗಿದ್ದ ಗೋದ್ರೇಜ್‌ನ ಬಾಗಿಲು ಮತ್ತು ಲಾಕರ್‌ನ್ನು ಮೀಟಿ ಅದರಲ್ಲಿದ್ದ 35,000/- ರೂಪಾಯಿ ನಗದು ಹಣ ಹಾಗೂ 41 ಗ್ರಾಂ ತೂಕದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿರೋದು ಗೊತ್ತಾಗಿದೆ.  ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!