Thursday, June 25, 2026
Homeಕರಾವಳಿಮಂಗಳೂರು; ಹೋಟೆಲ್ ನಿಂದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳ ಕಳವು

ಮಂಗಳೂರು; ಹೋಟೆಲ್ ನಿಂದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳ ಕಳವು

- Advertisement -
- Advertisement -

ಮಂಗಳೂರು: ಹೋಟೆಲ್ ಒಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿಯ ವಸ್ತುಗಳನ್ನು ಕಳವು ಮಾಡಿರುವ ಘಟನೆ ಮಂಗಳೂರಿನ  ದೇರೆಬೈಲ್‌-ಮಾಲೆಮಾರ್‌ ರಸ್ತೆಯಲ್ಲಿ ನಡೆದಿದೆ.

ಹೊಟೇಲ್‌ ಅನ್ನು ಕಳೆದ 20 ದಿನಗಳಿಂದ ಬಂದ್‌ ಮಾಡಲಾಗಿತ್ತು. ಹೊಟೇಲ್‌ ಮಾಲೀಕರು ಅ. 19ರಂದು ಸಂಜೆ ಹೊಟೇಲ್‌ ಅನ್ನು ತೆರೆದು ಸೊತ್ತುಗಳನ್ನು ಪರಿಶೀಲಿಸಿ ಬಾಗಿಲು ಹಾಕಿ ಹೋಗಿದ್ದರು. ಅ. 21ರಂದು ಬೆಳಗ್ಗೆ ಬಂದು ನೋಡಿದಾಗ ಹೊಟೇಲ್‌ನ ಬೀಗ ಮುರಿದು ಬಾಗಿಲು ತೆರೆದು ಹೊಟೇಲ್‌ನಲ್ಲಿದ್ದ ಎಸಿ ಸೇರಿದಂತೆ ಅಂದಾಜು 1.35 ಲ.ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವುದು ಗಮನಕ್ಕೆ ಬಂದಿದೆ ಎಂದು ಕಾವೂರು ಠಾಣೆಗೆ ದೂರು ನೀಡಲಾಗಿದೆ.

- Advertisement -

Latest News

error: Content is protected !!