ಬೆಳ್ತಂಗಡಿ : ಕಳಿಯ ಗ್ರಾಮದ ಸುಣ್ಣಲಡ್ಡ ಎಂಬಲ್ಲಿ ಆಸಿಫ್ ಎಂಬವರ ಮನೆಗೆ ಜೂ.9 ರಂದು ತಡರಾತ್ರಿ ಯಾರೋ ಕಳ್ಳರು ನುಗ್ಗಿ ರೂಂನಲ್ಲಿದ್ದ ಗೋದ್ರೆಜ್ ಓಪನ್ ಮಾಡಿ ದಾಖಲೆ ಪತ್ರ, ಬಟ್ಟೆ ಬರೆಗಳನ್ನು ಚೆಲ್ಲಾಪಿಲ್ಲಿ ಮಾಡಿ ಸುಮಾರು 7 ಸಾವಿರ ನಗದು ಹಣವನ್ನು ಕಳ್ಳರು ಕಳ್ಳತನ ಮಾಡಿದ್ದಾರೆ.
ಮನೆಯ ಕಪಾಟಿನ ಬಾಗಿಲು ತೆರೆಯುವ ಶಬ್ದ ಕೇಳಿ ಅಲ್ಲೇ ಮಲಗಿದ್ದ ಆಸಿಫ್ ಗೆ ಎಚ್ಚರವಾದಾಗ ಕಳ್ಳ ಹಿಂದಿನ ಬಾಗಿಲಿನಿಂದ ಓಡಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.ತಕ್ಷಣ ಮನೆ ಮಾಲಿಕರು ಕಳಿಯ ಗ್ರಾಮ ಪಂಚಾಯತ್ ಸದಸ್ಯರಾದ ಅಬ್ದುಲ್ ಕರೀಮ್ ಮತ್ತು ಅರ್ಶದ್ ರವರಿಗೆ ಮಾಹಿತಿ ನೀಡಿ ಅವರು ರಾತ್ರಿಯೇ ಬಂದು ಪೋಲಿಸರಿಗೆ ಮಾಹಿತಿ ನೀಡಿದರು. ಬೆಳ್ತಂಗಡಿ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಸುಬ್ಬಾಪುರ ಮಠ ಮತ್ತು ಸಿಬ್ಬಂದಿ ಬೇಟಿ ನೀಡಿ. ಮಂಗಳೂರಿನಿಂದ ಶ್ವಾನದಳ ಮತ್ತು ಬೆರಳಚ್ಚು ತಜ್ಞರನ್ನು ಕರೆಸಿ ಪರಿಶೀಲನೆ ನಡೆಸಿದ್ದಾರೆ.ಮನೆಯ ಮಾಲೀಕ ಅಸೀಫ್ ಬೆಳ್ತಂಗಡಿ ಪೊಲೀಸ್ ಠಾಣೆಗೆ ಜೂ.9 ರಂದು ದೂರು ನೀಡಿದ್ದು ಪೊಲೀಸರು BNS- 2023(u/s-331(4),305) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ


