Thursday, June 4, 2026
Homeಕರಾವಳಿಉಡುಪಿಕಾರ್ಕಳ: ವಾಚ್‌ ಅಂಗಡಿಯಲ್ಲಿ ಕಳ್ಳತನ: ಬೆಲೆಬಾಳುವ ವಾಚ್‌ಗಳು, ನಗದು ಕಳವು

ಕಾರ್ಕಳ: ವಾಚ್‌ ಅಂಗಡಿಯಲ್ಲಿ ಕಳ್ಳತನ: ಬೆಲೆಬಾಳುವ ವಾಚ್‌ಗಳು, ನಗದು ಕಳವು

- Advertisement -
- Advertisement -

ಕಾರ್ಕಳ: ವಾಚ್‌ ಅಂಗಡಿಯೊಂದಕ್ಕೆ ನುಗ್ಗಿದ ಕಳ್ಳರು ಬೆಲೆಬಾಳುವ ವಾಚ್‌ಗಳು ಹಾಗೂ ನಗದು ಕಳವು ಮಾಡಿರುವ ಘಟನೆ ಕಾರ್ಕಳ ಕಸಬಾ ಗ್ರಾಮದ ಮಾರ್ಕೆಟ್‌ ರಸ್ತೆಯಲ್ಲಿ ನಡೆದಿದೆ.

ಮೊಹಮ್ಮದ್ ತಾಹಿರ್ ಎನ್ನುವವರಿಗೆ ಸೇರಿದ ಅಂಗಡಿಯಲ್ಲಿ ಕಳ್ಳತನ ನಡೆದಿದೆ. ರಾತ್ರಿ ಅಂಗಡಿಗೆ ನುಗ್ಗಿದ ಕಳ್ಳರು ಅಂಗಡಿಯ ಬೀಗ ಒಡೆದು ಒಳನುಗ್ಗಿ, 25 ಸಾವಿರ ರೂ. ಮೌಲ್ಯದ 16 ವಾಚ್ ಗಳನ್ನು ಹಾಗೂ ಅಂಗಡಿಯಲ್ಲಿದ್ದ ನಗದನ್ನು ಕದ್ದಿದ್ದಾರೆ.  ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!