Saturday, June 6, 2026
Homeಕರಾವಳಿಕಡಬ: ಒಂದೂವರೆ ವರ್ಷಗಳ ಬಳಿಕ ಕಳ್ಳತನ ಆರೋಪಿಗಳ ಬಂಧನ

ಕಡಬ: ಒಂದೂವರೆ ವರ್ಷಗಳ ಬಳಿಕ ಕಳ್ಳತನ ಆರೋಪಿಗಳ ಬಂಧನ

- Advertisement -
- Advertisement -

ಕಡಬ: ಒಂದೂವರೆ ವರ್ಷಗಳ ಬಳಿಕ ಮನೆ ಕಳ್ಳತನ ಆರೋಪಿಗಳನ್ನು ಬಂಧಿಸಿರುವ ಘಟನೆ ಕಡಬದಲ್ಲಿ ನಡೆದಿದೆ.ಪೇರಡ್ಕ ಪೆಲತ್ರಾಣೆ ನಿವಾಸಿ ಸದ್ದಾಂ ಮತ್ತು ಮೀನಾಡಿ ನಿವಾಸಿ ತಾಜುದ್ದೀನ್ ಬಂಧಿತರು.

ಆರೋಪಿಗಳು 2021 ರ ಡಿಸೆಂಬರ್ 13ರ ಹಾಡ ಹಗಲೇ ಪೇರಡ್ಕ ನಿವಾಸಿ ಸಾಜನ್ ಎಂಬವರ ಮನೆಯಿಂದ ಸುಮಾರು 41 ಗ್ರಾಂ. ಚಿನ್ನಾಭರಣವನ್ನು ಕದ್ದಿದ್ದರು. ಸಂಜೆ ವೇಳೆಗೆ ಸಾಜನ್ ಮನೆಗೆ ಬಂದಾಗ ಹಿಂಭಾಗದ ಬಾಗಿಲನ್ನು ಒಡೆದಿರುವುದು ಗೊತ್ತಾಗಿದೆ. ಮನೆ ಒಳಗೆ ಹೋಗಿ ನೋಡಿದಾಗ 24 ಗ್ರಾಂ ತೂಕದ ಚಿನ್ನದ ಸರ, 8 ಗ್ರಾಂ ತೂಕದ ಚಿನ್ನದ ಸರ, ಹಾಗೂ 6 ಗ್ರಾಂ ತೂಕದ ಚಿನ್ನದ ಬೆಂಡೋಲೆ, ಮಕ್ಕಳ ಬೆಂಡೋಲೆಗಳು ಸೇರಿದಂತೆ 1.50 ಲಕ್ಷ ರೂ. ಮೌಲ್ಯದ ಸುಮಾರು 41 ಗ್ರಾಂ ಚಿನ್ನಾಭರಣ ಕಳವಾಗಿರೋದು ಗೊತ್ತಾಗಿದೆ.  ಅದರಂತೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇನ್ನು ಆರೋಪಿಗಳ ಪೈಕಿ ಸದ್ದಾಂ ಎಂಬಾತನು ಈ ಹಿಂದೆ ನಡೆದ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳ ಆರೋಪಿಯಾಗಿದ್ದಾನೆ. ಈತನ ಮೊಬೈಲ್ ಸಿಡಿಆರ್ ಆಧಾರದಲ್ಲಿ ಕಳ್ಳತನ ಪ್ರಕರಣವನ್ನು ಒಂದೂವರೆ ವರ್ಷದ ನಂತರ ಕಡಬ ಪೊಲೀಸರು ಪತ್ತೆಹಚ್ಚಿದ್ದಾರೆ.

- Advertisement -

Latest News

error: Content is protected !!