Sunday, June 30, 2024
Homeಕರಾವಳಿಮಂಗಳೂರುಮಂಗಳೂರಿನಲ್ಲಿ ಇಡೀ ರಾಜ್ಯವೇ ತಲೆತಗ್ಗಿಸುವ ಘಟನೆ : ಚಿಕಿತ್ಸೆಗೆಂದು ಮಹಿಳೆಯನ್ನು ಕರೆ ತಂದು ನಿರಂತರ ಅತ್ಯಾಚಾರ

ಮಂಗಳೂರಿನಲ್ಲಿ ಇಡೀ ರಾಜ್ಯವೇ ತಲೆತಗ್ಗಿಸುವ ಘಟನೆ : ಚಿಕಿತ್ಸೆಗೆಂದು ಮಹಿಳೆಯನ್ನು ಕರೆ ತಂದು ನಿರಂತರ ಅತ್ಯಾಚಾರ

spot_img
- Advertisement -
- Advertisement -

ಮಂಗಳೂರಿನಲ್ಲಿ ಇಡೀ ರಾಜ್ಯವೇ ತಲೆತಗ್ಗಿಸುವ ಘಟನೆ ನಡೆದಿದೆ. ಕಿತ್ಸೆಗೆಂದು ಮಹಿಳೆಯನ್ನು ಕರೆ ತಂದು ನಿರಂತರ ಅತ್ಯಾಚಾರವೆಸಗಿದ ಹೀನ ಘಟನೆ ನಡೆದಿದೆ.

ಮಂಗಳೂರಿನ ಕದ್ರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಚಿಕಿತ್ಸೆಗೆಂದು ಮಹಿಳೆಯನ್ನು ಕರೆದುಕೊಂಡು ಬಂದಿದ್ದಂತ ಆರೋಪಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಕೃತ್ಯವೆಸಗಿ ಮಹಿಳೆಯ ಬೆತ್ತಲೆ ಪೋಟೋಗಳನ್ನು ತೆಗೆದುಕೊಂಡು ಬ್ಲಾಕ್ ಮೇಲ್ ಮಾಡಿದ್ದಾನೆ.

ಇಷ್ಟಕ್ಕೆ ಸುಮ್ಮನಾಗದ ಕಾಮುಕ, ಈ ಪೋಟೋಗಳನ್ನು ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡಿ, ಬಳಿಕವೂ ಮಹಿಳೆಯ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿದ್ದಾನೆ. ಇದರಿಂದ ಬೇಸತ್ತಂತ ಮಹಿಳೆಯು, ಕದ್ರಿ ಠಾಣೆಗೆ ದೂರು ನೀಡಿದ್ದಳು.

ಈ ದೂರಿನ ಬೆನ್ನಲ್ಲೇ ಅಲರ್ಟ್ ಆದಂತ ಕದ್ರಿ ಠಾಣೆಯ ಪೊಲೀಸರು, ಕೇರಳ ಮೂಲದ ಆರೋಪಿ ಸಜಿತ್ ನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಬಂಧಿತ ಆರೋಪಿ ಸಜಿತ್ ಖಾಸಗಿ ಆಸ್ಪತ್ರೆ ಹಾಗೂ ಹೋಟೆಲ್ ನಲ್ಲಿ ಮಹಿಳೆಯ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿರೋದಾಗಿ ಹೇಳಲಾಗುತ್ತಿದೆ. ಈ ಬಗ್ಗೆ ಮತ್ತಷ್ಟು ಮಾಹಿತಿ ತಿಳಿದು ಬರಬೇಕಿದೆ.

- Advertisement -
spot_img

Latest News

error: Content is protected !!