Sunday, June 7, 2026
Homeಇತರಬೆಳ್ಮಣ್: ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಲಾರಿ, ಟಿಪ್ಪರ್ ಗಳ ಬ್ಯಾಟರಿ ಕಳವು...!

ಬೆಳ್ಮಣ್: ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಲಾರಿ, ಟಿಪ್ಪರ್ ಗಳ ಬ್ಯಾಟರಿ ಕಳವು…!

- Advertisement -
- Advertisement -

ಬೆಳ್ಮಣ್: ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಲಾರಿ, ಟಿಪ್ಪರ್ ಗಳ ಬ್ಯಾಟರಿ ಕಳವುಗೈದಿರುವ ಘಟನೆ ಕಾರ್ಕಳ ತಾಲೂಕಿನ ಬೆಳ್ಮಣ್ ನಲ್ಲಿ ನಡೆದಿದೆ.

ತಡರಾತ್ರಿ ಬೆಳ್ಮಣ್ ಚರ್ಚ್ ಬಳಿಯಲ್ಲಿ ನಿಲ್ಲಿಸಿದ್ದ ಸುಮಾರು ಹತ್ತುಕ್ಕೂ ಹೆಚ್ಚು ಲಾರಿ ಹಾಗೂ ಟಿಪ್ಪರ್ ಗಳ ಬ್ಯಾಟರಿಗಳನ್ನು ಕಳ್ಳತನ ನಡೆಸಲಾಗಿದೆ. ಕಳೆದ ಹದಿನೈದು ದಿನಗಳ ಹಿಂದೆ ಕೆಲವೊಂದು ಲಾರಿಗಳ ಬ್ಯಾಟರಿ ಕಳವಾಗಿತ್ತು. ಇದೀಗ ಮತ್ತೆ ಹತ್ತಕ್ಕೂ ಹೆಚ್ಚಿನ ಲಾರಿಗಳ ಬ್ಯಾಟರಿಯನ್ನು ಕಳ್ಳರು ಕದ್ದಿದ್ದಾರೆ ಎಂದು ಲಾರಿ ಮಾಲೀಕರು ದೂರಿದ್ದಾರೆ.

ಘಟನಾ ಸ್ಥಳಕ್ಕೆ ಕಾರ್ಕಳ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Latest News

error: Content is protected !!